Sunday, October 18, 2026
Homeತಾಜಾ ಸುದ್ದಿಬೆಂಗಳೂರು: ದಾರಿ ತಪ್ಪಿದ ದಂಪತಿ, ನಡುರಸ್ತೆಯಲ್ಲೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಗಂಡ

ಬೆಂಗಳೂರು: ದಾರಿ ತಪ್ಪಿದ ದಂಪತಿ, ನಡುರಸ್ತೆಯಲ್ಲೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಗಂಡ

- Advertisement -
- Advertisement -

ಬೆಂಗಳೂರು: ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲವಕುಶ ನಗರದಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಮೊದಲಿಗೆ ಚಾಕುವಿನಿಂದ ಇರಿದ ಆರೋಪಿ ಮಹಿಳೆ ಕೆಳಗೆ ಬೀಳುತ್ತಿದ್ದಂತೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ ಎನ್ನಲಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಂಜುನಾಥ್, ತುಮಕೂರು ಜಿಲ್ಲೆಯ ಹೇಮಾ (32) ಎಂಬುವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಪತ್ನಿ ಕೂಡ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳೆನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ.

ರಾತ್ರಿ ಮನೆಗೆ ಬಂದ ಮಂಜುನಾಥ್ ಅಕ್ರಮ ಸಂಬಂಧ ವಿಚಾರವಾಗಿ ಪತ್ನಿಯೊಂದಿಗೆ ಜಗಳ ತೆಗೆದಿದ್ದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಚಾಕುವಿನಿಂದ ಇರಿದಿದ್ದಾನೆ. ರಸ್ತೆಗೆ ಬಂದ ಮಹಿಳೆಯನ್ನು ಅಟ್ಟಾಡಿಸಿ ಕಲ್ಲಿನಿಂದ ಜಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯಿಂದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ನಂತರ, ಚಾಕು ಸಮೇತ ಠಾಣೆಗೆ ಬಂದು ಆರೋಪಿ ಶರಣಾಗಿದ್ದಾನೆ. ಕೊಲೆಗೆ ಕಾರಣ ಗೊತ್ತಾಗಿಲ್ಲ’ ಎಂದೂ ತಿಳಿಸಿದರು.

ಪತಿ ವಿರುದ್ಧ ದೂರು ನೀಡಿದ್ದ ಪತ್ನಿ
‘ಮಂಜುನಾಥ್, ಟೆಂಪೋ ಚಾಲಕನಾಗಿದ್ದ. ಹೇಮಾ, ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ದಂಪತಿ ನಡುವೆ ಹಲವು ಬಾರಿ ಜಗಳ ಆಗಿತ್ತು. ಪತಿ ವಿರುದ್ಧವೇ ಪತ್ನಿ ಠಾಣೆಗೆ ದೂರು ನೀಡಿದ್ದರು. ಹಿರಿಯರ ಸಂಧಾನದ ಬಳಿಕ ದಂಪತಿ ಒಟ್ಟಿಗೆ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

- Advertisement -

Latest News

error: Content is protected !!