Tuesday, June 9, 2026
Homeಕರಾವಳಿಬೆಳ್ತಂಗಡಿ : ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಿಬಿಐ ನಿಂದ ಮರುತನಿಖೆಗೆ ಹೈಕೋರ್ಟ್...

ಬೆಳ್ತಂಗಡಿ : ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಿಬಿಐ ನಿಂದ ಮರುತನಿಖೆಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ

- Advertisement -
- Advertisement -

ಬೆಳ್ತಂಗಡಿ : 11 ವರ್ಷಗಳ ಹಿಂದೆ ಕೊಲೆಯಾದ ಕಾಲೇಜ್ ವಿದ್ಯಾರ್ಥಿ ಸೌಜನ್ಯ ಪ್ರಕರಣ ಆರೋಪಿಗೆ ನಿರ್ದೋಷಿ ಎಂದು ತೀರ್ಪು ನೀಡಿದ ಹಲವು ತಿಂಗಳ ಬಳಿಕ ಇದೀಗ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಿ ಸಂತೋಷ್ ರಾವ್ ಗೆ ಸಾಕ್ಷದಾರ ಕೊರತೆಯಿಂದ ನಿರ್ದೋಷಿ ಎಂದು ತೀರ್ಪು ನೀಡಿದ್ದು ಇದೀಗ ನ.4 ಶನಿವಾರದಂದು ಸಿಬಿಐ ತನಿಖಾಧಿಕಾರಿಗಳು ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಕೆಲವೇ ದಿನಗಳಲ್ಲಿ ಹೈಕೋರ್ಟ್ ಪ್ರಕರಣ ದಾಖಲಿಸಿದ ದಾವೆಯ CC ಹೊರಡಿಸಲಿದೆ.

ಇನ್ನೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ಮಾಡುವವರಿಗೆ ನಡುಕ ಹುಟ್ಟಿಸಿದೆ. ಈವರೆಗೆ ಹೋರಾಟ ಮಾಡುವವರಿಗೆ ಕರ್ನಾಟಕದಲ್ಲಿ ಇನ್ನೂ ಮುಂದೆ ಹೋರಾಟ ನಿರ್ಬಂಧ ಹೇರಲಾಗುತ್ತೆ ಎನ್ನಲಾಗಿದೆ. ಅದಲ್ಲದೇ ಪ್ರಕರಣ ಯಾವ ರೀತಿಯಲ್ಲಿ ಮುಂದುವರಿಯತ್ತದೆ ಎಂದು ಕಾದು ನೋಡಬೇಕಾಗಿದೆ.

- Advertisement -

Latest News

error: Content is protected !!