- Advertisement -
![]()
- Advertisement -
ಹಾವೇರಿ : ಹಾನಗಲ್ ಪಟ್ಟಣ ಕಲ್ಲಹಕ್ಕಲ ನಿವಾಸಿ ಇರ್ಫಾನ್ ಎಂಬ ಉರಗ ರಕ್ಷಕ ಹಾವಿನ ರಕ್ಷಣೆಗೆ ಹೋಗಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಇಲ್ಲಿನ ಗಂಗಾ ನಗರದ ಓಣಿಯ ಮನೆಯೊಂದರಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಉರಗ ರಕ್ಷಕ ಇರ್ಫಾನ್ ಸಂಗೂರಗೆ ಕರೆ ಮಾಡಿದ್ದಾರೆ.
ಮನೆಯವರು ಕರೆ ಮಾಡುತ್ತಲೇ ಕೂಡಲೇ ಸ್ಥಳಕ್ಕೆ ಬಂದ ಇರ್ಫಾನ್ ಹಾವನ್ನು ಹಿಡಿಯೋದಕ್ಕೆ ಮುಂದಾಗಿದ್ದಾರೆ. ಈ ವೇಳೆ ಹಾವು ಇರ್ಫಾನ್ ಅವರಿಗೆ ಕಚ್ಚಿದೆ. ಕೂಡಲೆ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಇದುವರೆಗೂ 2 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಇರ್ಫಾನ್ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
- Advertisement -


