Thursday, June 4, 2026
HomeUncategorizedಸುಳ್ಯ ಪೇಟೆಯಲ್ಲಿ ಏಕಾಏಕಿ ಕುಸಿದ ಭೂಮಿ

ಸುಳ್ಯ ಪೇಟೆಯಲ್ಲಿ ಏಕಾಏಕಿ ಕುಸಿದ ಭೂಮಿ

- Advertisement -
- Advertisement -

ಸುಳ್ಯ: ಏಕಾ ಏಕಿ ಭೂಮಿ ಕುಸಿದಿರುವ ಘಟನೆ ಸುಳ್ಯ ಪೇಟೆಯ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಬಳಿ ನಡೆದಿದೆ. ಇನ್ನು  ಭೂಕುಸಿತವಾದ ಸ್ಥಳದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಒಂದು ನೆಲಕ್ಕಪ್ಪಳಿಸಿದೆ. ಆದರೆ ವಿದ್ಯುತ್ ಕಂಬ ಬೀಳುವ ಸಂದರ್ಭ ಕರೆಂಟ್ ಇಲ್ಲದ ಕಾರಣ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿ ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆ ಮಾಡಿದ್ದಾರೆ. ಏಕಾಏಕಿ ಉಂಟಾದ ಭೂಕುಸಿತಕ್ಕೆ ಸುಳ್ಯದ ಜನರು ಬೆಚ್ಚಿಬಿದ್ದಿದ್ದಾರೆ. ಭೂ ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!