Wednesday, June 3, 2026
Homeಚಿಕ್ಕಮಗಳೂರುನಟಿ ಶುಭಾ ಪೂಂಜ ಜೊತೆ ಅಪರಿಚಿತ ಯುವಕರಿಂದ ಅಸಭ್ಯ ವರ್ತನೆ:ಕುದುರೆಮುಖದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ...

ನಟಿ ಶುಭಾ ಪೂಂಜ ಜೊತೆ ಅಪರಿಚಿತ ಯುವಕರಿಂದ ಅಸಭ್ಯ ವರ್ತನೆ:ಕುದುರೆಮುಖದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕೈ ಹಿಡಿದು ಎಳೆದ ಗುಂಪು

- Advertisement -
- Advertisement -

ಚಿಕ್ಕಮಗಳೂರು: ಚಲನಚಿತ್ರ ನಟಿ ಶುಭಾ ಪೂಂಜ ಅವರೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತನೆ ತೋರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ನಿನ್ನೆ ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ನಡೆಯುತ್ತಿದ್ದ ಕೊರಗಜ್ಜ ಚಲನಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.ನಟಿ ಶುಭಾ ಪೂಂಜ ನೃತ್ಯ ಮಾಡುತ್ತಿದ್ದ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದಿದೆ ಎಂದು ಆರೋಪಿಸಲಾಗಿದೆ.

ಯುವಕರ ಅಸಭ್ಯ ವರ್ತನೆಯಿಂದಾಗಿ ಚಿತ್ರತಂಡ ಹಾಡಿನ ಚಿತ್ರೀಕರಣ ನಿಲ್ಲಿಸಿದ್ದು, ಇದುವರೆಗೂ ಪೊಲೀಸ್ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ.ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಲನಚಿತ್ರ ನಿರ್ಮಾಣವಾಗುತ್ತಿದ್ದು, ಕಳಸ ತಾಲೂಕಿನ
ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!