Friday, June 5, 2026
Homeತಾಜಾ ಸುದ್ದಿಬೆಂಗಳೂರು: ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ; ಚಾಲಕ ಸ್ಥಳದಲ್ಲಿಯೇ ಸಾವು

ಬೆಂಗಳೂರು: ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ; ಚಾಲಕ ಸ್ಥಳದಲ್ಲಿಯೇ ಸಾವು

- Advertisement -
- Advertisement -

ಬೆಂಗಳೂರು: ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸಾನ ಮಾವು ಬಳಿ ನಡೆದಿದೆ.

ಮೊನ್ನೆ ತಿರುಚಿಯಿಂದ ಬನ್ನೇರುಘಟ್ಟಗೆ ಆನೆಯನ್ನು ಕರೆತರಲಾಗಿತ್ತು. ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಅಂಬಾರಿಯನ್ನು ಹೊತ್ತಿದ್ದ ಆನೆ ಇದಾಗಿದ್ದು, ಮತ್ತೆ ತಿರುಚಿಗೆ ವಾಪಸ್ ಹೊರಟಿತ್ತು.

ಮಾರ್ಗ ಮಧ್ಯೆ ಸಾನ ಮಾವು ಸಮೀಪ ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಚಾಲಕ ಹೋಗಿದ್ದ. ಈ ವೇಳೆ ವಾಹನ ನಿಯಂತ್ರಣ ತಪ್ಪಿ ಅರಣ್ಯ ಪ್ರದೇಶದ ಒಳಗೆ ನುಗ್ಗಿದೆ. ಈ ಸಮಯದಲ್ಲಿ ವಾಹನವನ್ನು ಹತೋಟಿಗೆ ತರಲು ಚಾಲಕ ಪ್ರಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್‌ ವಾಹನಕ್ಕೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಮೃತ ಚಾಲಕನ ಹೆಸರು ಆರೋಗ್ಯ ಸ್ವಾಮಿ ಎಂದು ತಿಳಿದುಬಂದಿದ್ದು, ಹೊಸೂರು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಮೃತದೇಹವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!