Friday, June 5, 2026
Homeಕರಾವಳಿಬೆಳ್ತಂಗಡಿ: ಪತಿ ಹಾಗೂ ಮನೆಯವರಿಂದ ಪತ್ನಿಯಿಂದ ವರದಕ್ಷಿಣೆ ಕಿರುಕುಳ ದೂರು ದಾಖಲು

ಬೆಳ್ತಂಗಡಿ: ಪತಿ ಹಾಗೂ ಮನೆಯವರಿಂದ ಪತ್ನಿಯಿಂದ ವರದಕ್ಷಿಣೆ ಕಿರುಕುಳ ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ:  ತನಗೆ ತನ್ನ ಮಗುವಿಗೆ ಪತಿ ಹಾಗೂ ಅವರ ಮನೆಯವರು  ಹಾಗೂ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಬೆಳಾಲು ಗ್ರಾಮದ ಕೋರ್ದೊಟ್ಟು ನಿವಾಸಿ ಹರ್ಷಿತಾ ದೂರು ಕೊಟ್ಟ ಮಹಿಳೆ.

ಹರ್ಷಿತಾ ಅ. 17ರಂದು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿವಾಹದ ಒಂದು ತಿಂಗಳ ಕಾಲ ಗಂಡ ಚೆನ್ನಾಗಿದ್ದು, ಅನಂತರ ಗಂಡ ಹಾಗೂ ಗಂಡನ ಮನೆಯವರಾದ ಮಾವ ಚೆನ್ನಪ್ಪ ಗೌಡ, ಅತ್ತೆ ಗುಲಾಬಿ, ಬಾವ ರತ್ನಾಕರ, ನಾದಿನಿ ಸರೋಜಿನಿ, ಇನ್ನೋರ್ವ ನಾದಿನಿ ಸುಧಾ ಅವರು 2021ರ ಎ. 6ರಿಂದ 2022ರ ಸೆ. 19ರ ವರೆಗೆ ಉಜಿರೆ ಗ್ರಾಮದ ಉಜಿರೆ ಮತ್ತು ಕಡಬ ತಾಲೂಕು ರಾಮಕುಂಜ ಗ್ರಾಮದ ಅಂಬುಡೇಲು ಎಂಬಲ್ಲಿ ವಿನಾ ಕಾರಣ ನನ್ನನ್ನು ಹಾಗೂ ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳದೆ ಅವಾಚ್ಯಗಳಿಂದ ಬೈದು ಮಾನಸಿಕ ಹಿಂಸೆ ಹಾಗೂ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದಾರೆ. ಮಾತ್ರವಲ್ಲದೆ 10 ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ತಂದು ಕೊಡುವಂತೆ ಬೇಡಿಕೆ ಇಟ್ಟು ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ವಿಚಾರವನ್ನು, ಕುಟುಂಬದ ಹಿರಿಯರಲ್ಲಿ ಪಂಚಾಯತಿ ಮಾಡಿ ಸಾಂತ್ವನ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಲ್ಲಿ ದೂರು ನೀಡಿ ಸಮಸ್ಯೆ ಬಗೆಹರಿಯಬಹುದೆಂಬ ಆಶಾಭಾವನೆಯಿಂದ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!