Thursday, June 4, 2026
Homeಕರಾವಳಿಕಡಬ: ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು

ಕಡಬ: ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು

- Advertisement -
- Advertisement -

ಕಡಬ: ರೈಲಿನಿಂದ ಆಯತಪ್ಪಿ ಬಿದ್ದು ಕಡಬದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ್ (34) ಮೃತ ದುರ್ದೈವಿ.

ಸುರೇಶ್ ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿ ಮನೆಗೆ ಕರೆ ಮಾಡಿ ರೈಲಿನಲ್ಲಿ ಊರಿಗೆ ಬರುತ್ತಿರುವ ಬಗ್ಗೆ ತಿಳಿಸಿದ್ದರು. ಆದರೆ ಮುಂಜಾನೆ 8 ಗಂಟೆ ಸುಮಾರಿಗೆ ಅವರ ಮನೆಯವರು ಮೊಬೈಲ್ ನಂಬರ್ ಕರೆ ಮಾಡಿದಾಗ ಆಸ್ಪತ್ರೆಯ ಸಿಬ್ಬಂದಿ ಪೋನ್ ಕರೆ ಸ್ವೀಕರಿಸಿ ಸುರೇಶ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ.

ಚೌತಿ ಹಬ್ಬದ ಹಿನ್ನೆಲೆ ಮನೆಗೆ ಬಂದು ಸುರೇಶ್  ಮತ್ತೆ ಕೆಲಸಕ್ಕೆಂದು ಹೋಗಿದ್ದರು..

- Advertisement -

Latest News

error: Content is protected !!