Friday, June 5, 2026
Homeಕರಾವಳಿಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಭೆ ಕರೆದು ಅನುದಾನ ಬಿಡುಗಡೆ ಮಾಡುವಂತೆ ಉಸ್ತುವಾರಿ...

ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಭೆ ಕರೆದು ಅನುದಾನ ಬಿಡುಗಡೆ ಮಾಡುವಂತೆ ಉಸ್ತುವಾರಿ ಸಚಿವರಿಗೆ ಬಂಗೇರ ಮನವಿ

- Advertisement -
- Advertisement -

ಬೆಳ್ತಂಗಡಿ; ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಭೆ ಕರೆದು ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ. ವಸಂತ ಬಂಗೇರ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಸ್ಪಂದಿಸಿದ ಸಚಿವರು ಮುಂದಿನ ದ ಕ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.

ಸರ್ಕಾರಿ ವೆನ್‌ ಲಾಕ್‌ ಜಿಲ್ಲಾ  ಆಸ್ಪತ್ರೆಯಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ ತಯಾರಾಗಿದ್ದು ಶಸ್ತ್ರಚಿಕಿತ್ಸೆ ಕೊಠಡಿ ಮತ್ತು ವಾರ್ಡ್ ಗಳಿಗೆ ಉಪಕರಣಗಳ ಅಗತ್ಯ ಇದ್ದು ಈಗಾಗಲೇ ವೆನ್‌ಲಾಕ್‌ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯಿಂದ 2 ಕೋಟಿ, ಕೆ.ಎಂ.ಸಿ ಆಸ್ಪತ್ರೆಯಿಂದ 2 ಕೋಟಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಿಂದ 6 ಕೋಟಿ ಅನುದಾನ ನೀಡುವಂತೆ ತಾವು ಆದೇಶ ನೀಡಿದ್ದರೂ ಆರೋಗ್ಯ ರಕ್ಷಾ ಸಮಿತಿಯ ಅನುಮೋದನೆ ಅಗತ್ಯವಿರುವುದರಿಂದ ತಕ್ಷಣ ಸದ್ರಿ ಸಮಿತಿಯ ಸಭೆ ಕರೆದು ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆಯನ್ನೇ ಅವಲಂಬಿಸಿರುವ ದ.ಕ ಜಿಲ್ಲೆಯ ಬಡಜನತೆಗೆ ನೆರವಾಗುವರೇ  ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಶಸ್ತ್ರ ಚಿಕಿತ್ಸೆ ಕೊಠಡಿ ಮತ್ತು ವಾರ್ಡ್ ಗಳಿಗೆ ಉಪಕರಣಗಳನ್ನು ಅಳವಡಿಸುವಂತೆ ಸೂಕ್ತ ನಿರ್ದೆಶನ ನೀಡಬೇಕೆಂದು  ಅವರು ಮನವಿ ಮಾಡಿದ್ದರು.

- Advertisement -

Latest News

error: Content is protected !!