Friday, June 5, 2026
Homeಕರಾವಳಿಬಂಟ್ವಾಳ: ಸರ್ಕಾರಿ ಬಸ್ ನಿಂದ ಎಸೆಯಲ್ಪಟ್ಟು ಮಹಿಳೆಗೆ ಗಂಭೀರ ಗಾಯ

ಬಂಟ್ವಾಳ: ಸರ್ಕಾರಿ ಬಸ್ ನಿಂದ ಎಸೆಯಲ್ಪಟ್ಟು ಮಹಿಳೆಗೆ ಗಂಭೀರ ಗಾಯ

- Advertisement -
- Advertisement -

ಬಂಟ್ವಾಳ: ಲಾರಿಯೊಂದು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳಾ ಪ್ರಯಾಣಿಕೆಯೋರ್ವಳು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಪದು ಗ್ರಾಮದ ಕಡೆಗೋಳಿ ಎಂಬಲ್ಲಿ ನಡೆದಿದೆ.

ರಾಜೀವಿ ಗಾಯಗೊಂಡ ಮಹಿಳೆ.ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸರಕಾರಿ ಶಿಶಿಲ ಬಸ್ ಗೆ ಪುದು ಗ್ರಾಮದ ಕಡೆಗೋಳಿ ಎಂಬಲ್ಲಿ ಹಿಂ ಲಾರಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಗೆ ಹಾನಿಯಾಗಿದ್ದಲ್ಲದೆ, ಬಸ್ ನೊಳಗೆ ನಿಂತಿದ್ದ ಪ್ರಯಾಣಿಕರ ಪೈಕಿ ರಾಜೀವಿ ಎಂಬವರು ಬಸ್ ನ ಎದುರು ಬದಿಯ ಡೋರ್ ನಿಂದ ಹೊರಕ್ಕೆ ಎಸೆಯಲ್ಪಟ್ಟು ತಲೆಗೆ ಮತ್ತು ಇತರ ಭಾಗಗಳಿಗೆ ಗಂಭೀರವಾಗಿ ಗಾಯವಾಗಿದೆ.ಗಾಯಾಳು ರಾಜೀವಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!