Friday, June 5, 2026
Homeತಾಜಾ ಸುದ್ದಿಚೈತ್ರಾ ಕುಂದಾಪುರ ಐದು ಕೋಟಿ ಡೀಲ್ ಪ್ರಕರಣ; ವಜ್ರಾದೇಹಿ ಮಠದ ಶ್ರೀಗಳಿಗೆ ಸಿಸಿಬಿಯಿಂದ ನೋಟಿಸ್

ಚೈತ್ರಾ ಕುಂದಾಪುರ ಐದು ಕೋಟಿ ಡೀಲ್ ಪ್ರಕರಣ; ವಜ್ರಾದೇಹಿ ಮಠದ ಶ್ರೀಗಳಿಗೆ ಸಿಸಿಬಿಯಿಂದ ನೋಟಿಸ್

- Advertisement -
- Advertisement -

ಬೆಂಗಳೂರು: ಚೈತ್ರಾ ಕುಂದಾಪುರ ಐದು ಕೋಟಿ ಡೀಲ್ ಪ್ರಕರಣ ಉರುಳು ಇದೀಗ ವಜ್ರಾದೇಹಿ ಮಠದ ಶ್ರೀಗಳಿಗೆ ಸುತ್ತಿ ಹಾಕಿಕೊಂಡಿದೆ.

ಚೈತ್ರ ಕುಂದಾಪುರ ಬಂಧನ ಆದ ನಂತರ ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ, ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು.ಅದರ ಬೆನ್ನಲ್ಲೇ ಇದೀಗ ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ ಸ್ವಾಮಿಜೀಗೇ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಕಮಿಷನರ್  ರೀನಾ ಸುವರ್ಣ ಅವರು ವಜ್ರಾದೇಹಿ ಶ್ರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

- Advertisement -

Latest News

error: Content is protected !!