Saturday, June 6, 2026
Homeಕರಾವಳಿಉಡುಪಿಉಡುಪಿ; ಮನೆಗೆ ನುಗ್ಗಿ ಸುಮಾರು 73 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಉಡುಪಿ; ಮನೆಗೆ ನುಗ್ಗಿ ಸುಮಾರು 73 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

- Advertisement -
- Advertisement -

ಉಡುಪಿ; ಮನೆಗೆ ನುಗ್ಗಿದ ಕಳ್ಳರು ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಉಡುಪಿಯ ಲಾಲಾಲಜಪತ್ ರಾಯ್ ಮಾರ್ಗದ 4ನೇ ಅಡ್ಡರಸ್ತೆಯಲ್ಲಿ ನಡೆದಿದೆ.

ಅಮ್ಮುಂಜೆ ವಿಠಲ್‌ದಾಸ್ ನಾಯಕ್ ಎಂಬವರ ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್ ಬೆಡ್‌ರೂಮಿನ ಬಾಗಿಲುಗಳ ಬೀಗ ಮುರಿದು, ಒಳನುಗ್ಗಿದ ಕಳ್ಳರು, ಬೆಡ್‌ರೂಮ್‌ಗಳ ಅಲ್ಮೇರಾಗಳ ಬೀಗಗಳನ್ನು ತೆರೆದು ಅದರಲ್ಲಿದ್ದ 1,882 ಗ್ರಾಂ ತೂಕದ ಸುಮಾರು 66,36,300 ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಒಟ್ಟು 7,450 ಗ್ರಾಂ ತೂಕದ 6,70,500ರೂ.ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಕಳವಾದ ಸೊತ್ತುಗಳ ಒಟ್ಟು ಮೌಲ್ಯ 73,06,800ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!