Wednesday, June 3, 2026
Homeಕರಾವಳಿಮಂಗಳೂರುನಕಲಿ‌ ದಾಖಲೆ ಸೃಷ್ಟಿಸುತ್ತಿದ್ದ ವ್ಯಕ್ತಿ ಮಂಗಳೂರು ಸಿಸಿಬಿ ಬಲೆಗೆ

ನಕಲಿ‌ ದಾಖಲೆ ಸೃಷ್ಟಿಸುತ್ತಿದ್ದ ವ್ಯಕ್ತಿ ಮಂಗಳೂರು ಸಿಸಿಬಿ ಬಲೆಗೆ

- Advertisement -
- Advertisement -

ಮಂಗಳೂರು: ನಕಲಿ ದಾಖಲೆ ಪತ್ರಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಕರ್ನಕಟ್ಟೆ ನಿವಾಸಿಯಾಗಿರುವ ಬರ್ನಾಡ್ ರೋಶನ್ ಮಸ್ಕರೇನಸ್ (41) ಎಂಬಾತ ಬಂಧಿತ ಆರೋಪಿಯಾಗಿದ್ದು,‌
ನಕಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಉದ್ದಿಮೆ ಪರವಾನಿಗೆ ಪತ್ರ, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರಗಳನ್ನು ವಶ‌ಪಡಿಸಿಕೊಳ್ಳಲಾಗಿದೆ.

ಅಲ್ಲದೇ ಆರೋಪಿ ಮೂರು ವರ್ಷಗಳಿಂದ ನಕಲಿ ದಾಖಲೆ ಸೃಷ್ಟಿಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದು,
ಲ್ಯಾಪ್ ಟಾಪ್, ಪ್ರಿಂಟರ್, ಲ್ಯಾಮಿನೇಟರ್ ಮೆಷಿನ್ ಮತ್ತು ಬಯೋ ಮೆಟ್ರಿಕ್ ಡಿವೈಸ್ ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.

ಹೆಲ್ಪ್ ಲೈನ್ ಮಂಗಳೂರು ಎಂಬ ಸಂಸ್ಥೆಯ ಹೆಸರಿನ ಮೂಲಕ ಆರೋಪಿ ದಂಧೆಯಲ್ಲಿ ತೊಡಗಿದ್ದು
ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!