Saturday, June 6, 2026
Homeಕರಾವಳಿಬಂಟ್ವಾಳ; ಬೈಕ್ ನಲ್ಲಿ ಇರಿಸಿದ್ದ 1 ಲಕ್ಷದ 40 ಸಾವಿರದಲ್ಲಿ ಒಂದು ಲಕ್ಷ ರೂಪಾಯಿ ಕಳ್ಳತನ

ಬಂಟ್ವಾಳ; ಬೈಕ್ ನಲ್ಲಿ ಇರಿಸಿದ್ದ 1 ಲಕ್ಷದ 40 ಸಾವಿರದಲ್ಲಿ ಒಂದು ಲಕ್ಷ ರೂಪಾಯಿ ಕಳ್ಳತನ

- Advertisement -
- Advertisement -

ಬಂಟ್ವಾಳ: ದ್ವಿಚಕ್ರವಾಹನದಲ್ಲಿ ಇರಿಸಲಾಗಿದ್ದ 1 ಲಕ್ಷದ 40 ಸಾವಿರದಲ್ಲಿ ಒಂದು ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ಬಂಟ್ವಾಳ ತಾಲೂಕಿನ  ಬಿಸಿ ರೋಡಿನಲ್ಲಿ ನಡೆದಿದೆ.

ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರು ಅವರು ಶುಕ್ರವಾರ ಬೆಳಿಗ್ಗೆ ರೂ.1.40 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಬಳಿಕ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿದ್ದ, ದ್ವಿಚಕ್ರವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇಟ್ಟಿದ್ದರು.ಬಳಿಕ ಬೇರೆಬೇರೆ ಕೆಲಸ ನಿಮಿತ್ತ ಅಲ್ಲಿಂದ ತೆರಳಿದ್ದರು.

ಮಧ್ಯಾಹ್ನ ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇದ್ದು ಉಳಿದ 1 ಲಕ್ಷ ಹಣ ಕಳವಾಗಿದೆ ಎಂದು ತಿಳಿಸಿದ್ದಾರೆ.ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!