Sunday, May 19, 2024
Homeಕರಾವಳಿಉಡುಪಿಸುಳ್ಯ, ಪುತ್ತೂರು, ನೆಲ್ಯಾಡಿಯಲ್ಲಿ ಶೀಘ್ರದಲ್ಲಿಯೇ ಅನಿಲ ಸರಬರಾಜು ಮಾಡುವ ಗೇಲ್ ಕಂಪನಿ ಆರಂಭ

ಸುಳ್ಯ, ಪುತ್ತೂರು, ನೆಲ್ಯಾಡಿಯಲ್ಲಿ ಶೀಘ್ರದಲ್ಲಿಯೇ ಅನಿಲ ಸರಬರಾಜು ಮಾಡುವ ಗೇಲ್ ಕಂಪನಿ ಆರಂಭ

spot_img
- Advertisement -
- Advertisement -

ಮಂಗಳೂರು: ನಗರದಲ್ಲಿ ಕೈಗಾರಿಕೆ, ಅಡುಗೆ ಮತ್ತು ವಾಣಿಜ್ಯ ಅಗತ್ಯಕ್ಕೆ ಅನಿಲ ಸರಬರಾಜು ಮಾಡುತ್ತಿರುವ ಗೇಲ್ ಕಂಪೆನಿಯು ಜಿಲ್ಲೆಯಾದ್ಯಂತ 100 ಸಿಎನ್​ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಿದೆ.

ಯೋಜನೆ ಪೂರ್ಣಗೊಳ್ಳಲು 8 ವರ್ಷಗಳ ಅವಧಿ ಬೇಕಾಗಿದ್ದು, ಪುತ್ತೂರು, ಸುಳ್ಯ, ನೆಲ್ಯಾಡಿಯಲ್ಲಿ ಶೀಘ್ರದಲ್ಲಿಯೇ ಘಟಕಗಳು ಆರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಮನೆ ಮನೆಗೆ ಕೊಳವೆ ಮೂಲಕ ಅಡುಗೆ ಅನಿಲವನ್ನು ತಲುಪಿಸುವ ಪಿಎನ್​ಜಿ ಸೌಲಭ್ಯಕ್ಕೆ ಜಿಲ್ಲೆಯಲ್ಲಿ ಉತ್ತಮ ಬೇಡಿಕೆ ದೊರಕಿದ್ದು, ವಸತಿ ಸಮುಚ್ಛಯ, ಫ್ಲ್ಯಾಟ್, ಅಪಾರ್ಟ್ ಮೆಂಟ್ ಗಳಿಂದ 1 ಲಕ್ಷ್ಮಕ್ಕೂ ಅಧಿಕ ಅರ್ಜಿಗಳು ಬಂದಿರುತ್ತವೆ. ಭವಿಷ್ಯದಲ್ಲಿ 3 ಲಕ್ಷ್ಮದ 5 ಸಾವಿರ ಮನೆಗಳಿಗೆ ಈ ಸೌಲಭ್ಯ ಸಿಗಲಿದೆ. ಆರಂಭಿಕ ಘಟ್ಟದಲ್ಲಿ ಸುರತ್ಕಲ್, ಮೂಲ್ಕಿ, ಕುಳಾಯಿ ಮತ್ತು ಬೊಂದೆಲ್ ನಲ್ಲಿ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.  

ಹೋಟೆಲ್ ರೆಸ್ಟಾರೆಂಟ್ ಸೇರಿ 40 ಕೈಗಾರಿಕೆ ಮತ್ತು 124 ವಾಣಿಜ್ಯ ಸಂಸ್ಥೆಗಳಿಗೆ ಪಿಎನ್​ಜಿ ಸೌಲಭ್ಯವನ್ನು ನೀಡುವ ಸಂಬಂಧ ಒಪ್ಪಂದವಾಗಿದೆ. ಇನ್ನು ಸಿಎನ್​ಜಿ ಘಟಕಗಳ ಮೂಲಕ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಅನಿಲವನ್ನು ಸರಬರಾಜು ಮಾಡಲಾಗುತ್ತಿದೆ. ಈ ಸೌಲಭ್ಯದ ಕುರಿತ ಹೆಚ್ಚಿನ ಮಾಹಿತಿಯನ್ನು ಪಿಎನ್​ಜಿ ಮಿತ್ರ ಆ್ಯಪ್ ಮೂಲಕ ಪಡೆದುಕೊಳ್ಳಬಹುದು.

- Advertisement -
spot_img

Latest News

error: Content is protected !!