Wednesday, June 3, 2026
Homeಕರಾವಳಿಉಡುಪಿಕಾರ್ಕಳ; ಯುವಕನೊಬ್ಬ ನಾಪತ್ತೆ

ಕಾರ್ಕಳ; ಯುವಕನೊಬ್ಬ ನಾಪತ್ತೆ

- Advertisement -
- Advertisement -

ಕಾರ್ಕಳ : ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ  ಉಡುಪಿ ಜಿಲ್ಲೆಯ  ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪೆರ್ವಾಜೆ ಪೊತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ. ಇಲ್ಲಿನ ಗುಂಡ್ಯಾ ಮನೆ ನಿವಾಸಿ ಪ್ರಸಾದ (25) ನಾಪತ್ತೆಯಾಗಿರುವ ಯುವಕ. 

ಈತ ಸುಮಾರು 4 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ರಾತ್ರಿ ಮಲಗಿಕೊಂಡಿದ್ದ ಯುವಕ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಕಾಣೆಯಾಗಿದ್ದ ಎನ್ನಲಾಗಿದೆ.ಪ್ರಸಾದ ಮನೆಯಲ್ಲಿ ಇಲ್ಲದೇ ಇರುವುದನ್ನು ಕಂಡ ಮನೆಯವರು ನೆರೆಹೊರೆಯಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಪತ್ತೆಯಾಗದ ಹಿನ್ನೆಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾರೆ.

h 5 ಅಡಿ 7 ಇಂಚು ಎತ್ತರ ಗೋಧಿ ಮೈಬಣ್ಣ , ಆಕಾಶ ನೀಲಿ ಬಣ್ಣದ ಶರ್ಟ್‌, ಕಪ್ಪು ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿರುತ್ತಾರೆ. ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾನೆ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!