Thursday, June 4, 2026
Homeಕರಾವಳಿಮಂಗಳೂರು: ನಂತೂರು ಸರ್ಕಲ್ ನಲ್ಲಿ ಚಲಿಸುತ್ತಿದ್ದ ಬಸ್ ನಿಂದ ರಸ್ತೆಗೆಸೆಯಲ್ಪಟ್ಟು ನಿರ್ವಾಹಕ ಸಾವು

ಮಂಗಳೂರು: ನಂತೂರು ಸರ್ಕಲ್ ನಲ್ಲಿ ಚಲಿಸುತ್ತಿದ್ದ ಬಸ್ ನಿಂದ ರಸ್ತೆಗೆಸೆಯಲ್ಪಟ್ಟು ನಿರ್ವಾಹಕ ಸಾವು

- Advertisement -
- Advertisement -

ಮಂಗಳೂರು: ಚಲಿಸುತ್ತಿದ್ದ ಖಾಸಗಿ ಬಸ್ ನಿಂದ ಆಯ ತಪ್ಪಿ ಬಿದ್ದು ನಿರ್ವಾಹಕ ಸಾವನ್ನಪ್ಪಿದ್ದ ದುರ್ಘಟನೆ ಮಂಗಳೂರು ನಗರದಲ್ಲಿ ಇಂದು ನಡೆದಿದೆ.

ನಂತೂರು ವೃತ್ತದಲ್ಲಿ ಅವಘಡ ಸಂಭವಿಸಿದ್ದು, ಬಸ್ ನ ಮುಂದಿನ ಬಾಗಿಲಿನಿಂದ ಆಯ ತಪ್ಪಿ ಬಿದ್ದು ಬಾಗಲಕೋಟೆ ಮೂಲದ ಈರಯ್ಯ( 23) ಮೃತಪಟ್ಟಿದ್ದಾರೆ.

ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ತೆರಳುವ ವೇಳೆ ನಂತೂರು ಸರ್ಕಲ್ ನಲ್ಲಿ ತಿರುವು ತೆಗೆದುಕೊಂಡ ರಭಸಕ್ಕೆ ನಿರ್ವಾಹಕ ಈರಯ್ಯ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ನಿರ್ವಾಹಕ ರಸ್ತೆಗೆ ಬಿದ್ದ ತಕ್ಷಣ ಟ್ರಾಫಿಕ್ ಪೊಲೀಸರು ಮತ್ತು ಸ್ಥಳೀಯರು ಆಸ್ಪತ್ರೆಗೆ ದಾಖಲಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಈರಯ್ಯ ಮೃತಪಟ್ಟಿದ್ದಾರೆ.

ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಈರಯ್ಯ ರಸ್ತೆಗೆಸೆಯಲ್ಪಟ್ಟ ವೀಡಿಯೋ ಸಮೀಪದಲ್ಲಿದ್ದ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!