Saturday, June 6, 2026
Homeಕರಾವಳಿಉಪ್ಪಿನಂಗಡಿ; ವೃದ್ಧರೊಬ್ಬರನ್ನು ಯಮಾರಿಸಿ 14 ಗ್ರಾಂ  ತೂಕದ ಚಿನ್ನದ ಸರ ಎಗರಿಸಿದ ಯುವಕ

ಉಪ್ಪಿನಂಗಡಿ; ವೃದ್ಧರೊಬ್ಬರನ್ನು ಯಮಾರಿಸಿ 14 ಗ್ರಾಂ  ತೂಕದ ಚಿನ್ನದ ಸರ ಎಗರಿಸಿದ ಯುವಕ

- Advertisement -
- Advertisement -

ಉಪ್ಪಿನಂಗಡಿ; ವೃದ್ಧರೊಬ್ಬರನ್ನು ಯಮಾರಿಸಿ ಯುವಕನೊಬ್ಬ 14 ಗ್ರಾಂ  ತೂಕದ ಚಿನ್ನದ ಸರ ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಕೋಟೆ ನಿವಾಸಿ ಗಂಗಾಧರ್‌ ಟೈಲರ್‌ (70) ಎಂಬವರು ಮುಂಜಾನೆ 7.30ರ ಸುಮಾರಿಗೆ ಹೊಟೇಲೊಂದಕ್ಕೆ ಹೋಗುತ್ತಿದ್ದರು.ಈ ವೇಳೆ ಅವರೊಂದಿಗೆ ಯುವಕನೊಬ್ಬ ಮಾತನಾಡಿದ್ದು ಆತ ಅವರ ಕತ್ತಿನಲ್ಲಿದ್ದ  ಚಿನ್ನದ ಸರವನ್ನು ಯಾವುದೋ ಮಾಯದಲ್ಲಿ ಆತನ ಕೈಗೆ ನೀಡುವಂತೆ ಮಾಡಿದ್ದಾನೆ. ಬಳಿಕ ಬ್ಯಾಂಕಿಗೆ ಹೋಗಿ ಠಸೆ ಪೇಪರ್‌ ತನ್ನಿ ಎಂದು ಹೇಳಿ ಅವರನ್ನು ಕಳುಹಿಸಿದ್ದಾನೆ.

ಈ ವೇಳೆ ಬ್ಯಾಂಕಿನತ್ತ ಹೊರಟ ಗಂಗಾಧರ್ ಟೈಲರ್ ಅವರಿಗೆ ನಾನ್ಯಾಕೆ ಆತನಿಗೆ ಚಿನ್ನದ ಸರ ತೆಗ್ದು ಕೊಟ್ಟೆ ಅನ್ನೋದು ನೆನಪಾಗಿದೆ. ಅಲ್ಲದೇ ಬ್ಯಾಂಕಿಗೆ ಯಾಕೆ ಹೋಗುತ್ತಿದ್ದೇನೆ ಎಂದು ನೆನಪಾಗಿ ಯುವಕನಿದ್ದ ಜಾಗಕ್ಕೆ ವಾಪಾಸ್ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಆತ ನಾಪತ್ತೆಯಾಗಿದ್ದಾನೆ. ಆಗ ಅವರಿಗೆ ಮೋಸ ಹೋಗಿರೋದು ಅರಿವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!