Monday, June 8, 2026
Homeಕರಾವಳಿಬೆಳ್ತಂಗಡಿ: ಲೋನ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಅಪರಿಚಿತ ವ್ಯಕ್ತಿ

ಬೆಳ್ತಂಗಡಿ: ಲೋನ್ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಅಪರಿಚಿತ ವ್ಯಕ್ತಿ

- Advertisement -
- Advertisement -

ಬೆಳ್ತಂಗಡಿ: ಲೋನ್ ಕೊಡಿಸುವುದಾಗಿ ಹೇಳಿ ಅಪರಿಚಿತ ವ್ಯಕ್ತಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಪಡಂಗಡಿಯಲ್ಲಿ ನಡೆದಿದೆ.

ಪಡಂಗಡಿ ನಿವಾಸಿ ನೀನಾ ರೋಡ್ರೀಗಸ್‌ (35) ವಂಚನೆಗೆ ಒಳಗಾದವರು. ಅವರಿಗೆ ಆ. 1ರಂದು ಅಪರಿಚಿತ ವ್ಯಕ್ತಿಯೋರ್ವರು ರಿಲಾಯನ್ಸ್ ಫೈನಾನ್ಸ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಶೇ.5 ಬಡ್ಡಿ ದರದಲ್ಲಿ ಲೋನ್‌ ಕೊಡುವುದಾಗಿಯೂ, ಲೋನ್‌ ಬೇಕಾದಲ್ಲಿ ಬ್ಯಾಂಕ್‌ ಹಾಗೂ ಇತರ ದಾಖಲಾತಿಗಳನ್ನು ನೀಡುವಂತೆ ತಿಳಿಸಿದ್ದಾರೆ.

 ಇದನ್ನು ನಂಬಿದ ಲೀನಾ ರೊಡ್ರಿಗಸ್‌ ಕರೆ ಬಂದ ನಂಬರ್‌ಗೆ ಬ್ಯಾಂಕ್‌ ದಾಖಲೆ ಸೇರಿದಂತೆ ಇತರ ದಾಖಲೆಗಳನ್ನು ಕಳುಹಿಸಿದ್ದು, ಬಳಿಕ ಅಪರಿಚಿತ ವ್ಯಕ್ತಿಯು ಇವರ ಖಾತೆಗಳಿಂದ ಒಟ್ಟು 8,40,275 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆನ್‌ ಲೈನ್‌ ಮುಖಾಂತರ ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!