Sunday, June 7, 2026
Homeಕರಾವಳಿವಿಟ್ಲ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಮೌನ ವಹಿಸಿರೋದ್ಯಾಕೆ?: ಸಂಸದೆಗೆ ಕಾಂಗ್ರೆಸ್ ಪ್ರಶ್ನೆ

ವಿಟ್ಲ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಮೌನ ವಹಿಸಿರೋದ್ಯಾಕೆ?: ಸಂಸದೆಗೆ ಕಾಂಗ್ರೆಸ್ ಪ್ರಶ್ನೆ

- Advertisement -
- Advertisement -

ಬೆಂಗಳೂರು: ವಿಟ್ಲದಲ್ಲಿ ಸಂಘ ಪರಿವಾರದವರು ಎನ್ನಲಾದ ಐವರಿಂದ ಬಾಲಕಿ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ”ದಲಿತ ಹೆಣ್ಣುಮಗಳು ಎಂಬ ಕಾರಣಕ್ಕೆ ಅಸಡ್ಡೆಯೇ?ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಶೋಭಾ ಕರಂದ್ಲಾಜೆ ಅವರ ಬಾಯಿಯನ್ನು ಈಗ ಅದುಮಿ ಹಿಡಿದವರು ಯಾರು?” ಎಂದು ಪ್ರಶ್ನಿಸಿದೆ..

”ಉಡುಪಿಯಲ್ಲಿ ಇಲಿಯನ್ನು ಹುಲಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಅದೇ ಕರಾವಳಿಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಮೌನವೇಕೆ?, ಆ ದಲಿತ ಬಾಲಕಿ ಹಿಂದೂ ಅಲ್ಲವೇ?, ಬಿಜೆಪಿಗೆ ನಂಟಿರುವವರು ನಡೆಸುವ ಅತ್ಯಾಚಾರ, ಅನಾಚಾರಗಳಿಗೆ ಬಿಜೆಪಿಯ ಸಮ್ಮತಿ ಇದೆಯೇ?” ಎಂದಿದೆ.

- Advertisement -

Latest News

error: Content is protected !!