Tuesday, July 1, 2025
Homeಮನರಂಜನೆನನ್ಗೆ ಕೊರೊನಾ ಇಲ್ಲ ದಯವಿಟ್ಟು ಸುಳ್ಳು ಸುದ್ದಿ ಹರಡಿಸ್ಬೇಡಿ ಅಂತಿದ್ದಾರೆ ಖ್ಯಾತ ಕಿರುತೆರೆ ನಟಿ

ನನ್ಗೆ ಕೊರೊನಾ ಇಲ್ಲ ದಯವಿಟ್ಟು ಸುಳ್ಳು ಸುದ್ದಿ ಹರಡಿಸ್ಬೇಡಿ ಅಂತಿದ್ದಾರೆ ಖ್ಯಾತ ಕಿರುತೆರೆ ನಟಿ

spot_img
- Advertisement -
- Advertisement -

ಬೆಂಗಳೂರು : ಈಗ ಮಾತೆತ್ತಿದ್ರೆ ಕೊರೊನಾದ್ದೇ ಸುದ್ದಿ. ಎಲ್ಲರ ಬಾಯಲ್ಲೂ ಬರೀ ಕೊರೊನಾ ಕೊರೊನಾ. ಕನ್ನಡದ ಖ್ಯಾತ ಧಾರಾವಾಹಿ ಲಕ್ಷ್ನೀ ಬಾರಮ್ಮದಲ್ಲಿ ನಟಿಸಿದ ನಟಿ ರಶ್ಮಿ ಪ್ರಭಾಕರ್ ಅವರು ಕೂಡ ಕೊರೊನಾ ಆತಂಕವನ್ನು ಎದುರಿಸುತ್ತಿದ್ದಾರೆ. ಅವರು ನಟಿಸುತ್ತಿದ್ದ ಧಾರಾವಾಹಿಯ ಕಲಾವಿದನೊಬ್ಬನಿಗೆ ಕೊರೊನಾ ಪಾಸಿಟಿವ್ ಆದ ಕಾರಣ ಅವರು ಅಭಿನಯಿಸುತ್ತಿದ್ದ ತೆಲುಗು ಧಾರಾವಾಹಿಯ ಚಿತ್ರೀಕರಣ ಸ್ಥಗಿತಗೊಂಡಿದೆ ಅನ್ನೋ ಮಾಹಿತಿ ಎಲ್ಲೆಡೆ ಹರಿದಾಡಿತ್ತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ರಶ್ಮಿ ಪ್ರಭಾಕರ್ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ದಯವಿಟ್ಟು ನನಗೆ ಕೊರೊನಾ ಪಾಸಿಟಿವ್ ಇಲ್ಲ. ನನಗೆ ಕೊರೊನಾ ದೃಢಪಟ್ಟಿದೆ ಅನ್ನೋ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದು ತಪ್ಪು ಮಾಹಿತಿ. ನನ್ನ ಧಾರಾವಾಹಿಯ ಶೂಟಿಂಗ್ ನಿಂತಿರೋದು ನಿಜ. ಆದರೆ ಅದಕ್ಕೆ ಕಾರಣ ಇನ್ನೊಂದು ಧಾರಾವಾಹಿಯ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿರೋದು. ಹಾಗಾಗಿ ನನ್ನ ಧಾರಾವಾಹಿಯ ಶೂಟಿಂಗ್ ನಡೆಯುತ್ತಿಲ್ಲ. ನಾನು ಆರಾಮಾವಾಗಿದ್ದೇನೆ. ಪ್ಲೀಸ್ ಸುಳ್ಳು ಸುದ್ದಿ ಹರಡಬೇಡಿ ಎಂದಿದ್ದಾರೆ.

- Advertisement -
spot_img

Latest News

error: Content is protected !!