Tuesday, August 18, 2026
Homeಕರಾವಳಿಮಂಗಳೂರು: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿಗೆ ಗಾಯ

ಮಂಗಳೂರು: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿಗೆ ಗಾಯ

- Advertisement -
- Advertisement -

ಮಂಗಳೂರು: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿಗೆ ಗಾಯವಾಗಿರುವ ಘಟನೆ ಮಂಗಳೂರು ನಗರದ ಶಿವಭಾಗ್‌ ಬಳಿ ಸಂಭವಿಸಿದೆ.ಹರೀಶ್‌ ಗಾಯಗೊಂಡ ವ್ಯಕ್ತಿ. ಹರೀಶ್ ಬುಧವಾರ ಬೆಳಗ್ಗೆ 8.30ಕ್ಕೆ ಕುಲಶೇಖರ ಬಸ್‌ ನಿಲ್ದಾಣದಿಂದ ಶಿವಭಾಗ್‌ ಕಡೆಗೆ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದರು.ಶಿವಭಾಗ್‌ ಸಮೀಪಿಸುತ್ತಿದ್ದರಿಂದ ತಾನು ಕುಳಿತಿದ್ದ ಸೀಟಿನಿಂದ ಎದ್ದು ಬಸ್‌ನ ಹಿಂಬಾಗಿಲ ಬಳಿಗೆ ಬರುತ್ತಿದ್ದರು.

ಈ ವೇಳೆ ಬಸ್‌ ಚಾಲಕ ಜಿಮ್ಮಿಸ್‌ ಸೂಪರ್‌ ಮಾರ್ಟ್‌ ಎದುರು ಇದ್ದ ಹಂಪ್ಸ್‌ನಲ್ಲಿ ಬಸ್ಸನ್ನು ನಿಧಾನಗೊಳಿಸದೆ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಹರೀಶ್‌ ಅವರು ಮೆಟ್ಟಿಲುಗಳ ಮೂಲಕ ರಸ್ತೆಗೆ ಬಿದ್ದು ಅವರ ತಲೆಗೆ ಗಾಯವಾಗಿದೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!