Thursday, June 4, 2026
Homeಕರಾವಳಿಉಡುಪಿಉಡುಪಿ; ಮನೆಯಿಂದ ಯುವಕ ನಾಪತ್ತೆ ಪ್ರಕರಣ; ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಉಡುಪಿ; ಮನೆಯಿಂದ ಯುವಕ ನಾಪತ್ತೆ ಪ್ರಕರಣ; ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

- Advertisement -
- Advertisement -

ಉಡುಪಿ; ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಎಂಬವರು ರಾತ್ರಿ ಮನೆಯಿಂದ ಹೊರ ಹೋದವರು ವಾಪಾಸ್ ಬಂದಿಲ್ಲ. ಇದು ಅವರ ಸುಳಿವು ಸಿಕ್ಕಿಲ್ಲ. ಅವರು ನೀರು ಪಾಲಾಗಿರುವ ಶಂಕೆ ಇದೆ ಎನ್ನಲಾಗುತ್ತಿದೆ.

ಜುಲೈ 22ರಂದು ತನ್ನ ಮನೆ ಮಂದಿಯೊಂದಿಗೆ ಊಟ ಮಾಡಿ ರಾತ್ರಿ ಮಲಗಿದ್ದ ಸುರೇಶ್ ಜು.23ರಂದು ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿರು ಬಗ್ಗೆ ಸಹೋದರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ಸುರೇಶನ ಪತ್ತೆಗೆ ಗ್ರಾಮಸ್ಥರ ನೆರವಿನೊಂದಿಗೆ ಶೋಧಕಾರ್ಯ ಮುಂದುವರೆದಿದ್ದು ಮನೆಪಕ್ಕದ ನದಿ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಕೊಲ್ಲೂರು ಠಾಣೆ ಉಪನಿರಿಕ್ಷಕಿ ಸುಧಾರಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!