Thursday, May 2, 2024
Homeಕರಾವಳಿಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಕೆಪಿಸಿಸಿ ಬ್ರೇಕ್:ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸಿನ ಇಬ್ಬರು ನಾಯಕರಿಗೆ...

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಕೆಪಿಸಿಸಿ ಬ್ರೇಕ್:ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸಿನ ಇಬ್ಬರು ನಾಯಕರಿಗೆ ಕೆಪಿಸಿಸಿ ಗೇಟ್ ಪಾಸ್:ನೂತನ ಇಬ್ಬರು ನಾಯಕರನ್ನು ಆಯ್ಕೆ ಮಾಡಿದ ಕೆಪಿಸಿಸಿ

spot_img
- Advertisement -
- Advertisement -

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬಣ ರಾಜಕೀಯದಲ್ಲಿ ಪಕ್ಷದ ಮರಿಯದೆಯನ್ನು ಪದೆ ಪದೆ ಬೀದಿ ಪಾಲು ಮಾಡುತ್ತಿರುವ ವಿಚಾರಗಳು ಕೆಪಿಸಿಸಿ ಕಚೇರಿಗೆ ತಲುಪುತ್ತಿದ್ದು. ಕಳೆದ ವಾರ ನಡೆದ ಕಾಂಗ್ರೆಸ್ ಪಕ್ಷದ ಗಲಾಟೆ ,ಗದ್ದಲ ವಿಚಾರ ಕೆಪಿಸಿಸಿಗೆ ನೇರವಾಗಿ ನೈಜ ವಿಚಾರಗಳು ತಲುಪಿತ್ತು. ಇದೀಗ ಗಂಭೀರವಾಗಿ ಚರ್ಚೆ ನಡೆಸಿ ಕೊನೆಗೂ ಕೆಪಿಸಿಸಿ ಅಸ್ತ್ರ ಪ್ರಯೋಗ ಮಾಡಿ ಇಬ್ಬರಿಗೆ ಗೇಟ್ ಪಾಸ್ ಮಾಡುವ ಮೂಲಕ ಬೆಳ್ತಂಗಡಿಯ ಇಬ್ಬರು ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಶಾಕ್ ನೀಡಿದೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್ ನೀಡಿ ನೂತನ ಇಬ್ಬರು ಅಧ್ಯಕ್ಷರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್  ನೇಮಕ ಮಾಡುವ ಮೂಲಕ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಬಣ ರಾಜಕೀಯಕ್ಕೆ ಬ್ರೇಕ್ ಹಾಕಿದ್ದಾರೆ‌.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರನ್ನು ಬದಲಾವಣೆ ಮಾಡಿ ಮಾಜಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಪೆರಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ ನೇಮಕವಾಗಿದ್ದಾರೆ. ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ರಂಜನ್ ಜಿ ಗೌಡ ಅವರನ್ನು ಬದಲಾವಣೆ ಮಾಡಿ ಲಾಯಿಲ ಸೌಹಾರ್ದ ಕೋ-ಆಪರೆವಟಿವ್ ಸೊಸೈಟಿ (ಲಿ) ಅಧ್ಯಕ್ಷರು ,ಶ್ರೀ ಸ್ವಾಮಿಪ್ರಸಾದ್ ಅಸೋಸಿಯೇಟ್ಸ್ ಅಧ್ಯಕ್ಷರಾದ  ನಾಗೇಶ್ ಕುಮಾರ್ ಗೌಡ  ಅವರನ್ನು ಕೆಪಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಇಬ್ಬರು ಅಧ್ಯಕ್ಷರಿಗೆ ಈಗಾಗಲೇ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟೀಸ್ ಜಾರಿಯಾಗಿ.ಶಿಸ್ತು ಸಮಿತಿಯ ಮಧ್ಯಂತರ ವರದಿ, ಚುನಾವಣಾ ಸಂದರ್ಭದಲ್ಲಿ ನಿಷ್ಕ್ರಿಯರಾದ ಬ್ಲಾಕ್ ಅಧ್ಯಕ್ಷರುಗಳು ಮತ್ತು ಇತ್ತೀಚಿನ ದಿನಗಳಲ್ಲಿ ಪಕ್ಷದ ಶಿಸ್ತು ಮರೆತು ಪಕ್ಷದ ಅಭ್ಯರ್ಥಿಯ ವಿರೋಧವಾಗಿ ಮಾಧ್ಯಮಕ್ಕೆ ಮತ್ತು ಸಭೆಯಲ್ಲಿ  ನೀಡಿದ ಬಹಿರಂಗ ಹೇಳಿಕೆಗಳೇ ಈ ಬದಲಾವಣೆಗೆ ಕಾರಣವಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಹಾ ಎಕ್ಸ್‌ಪ್ರೆಸ್ ವೆಬ್ ಸೈಟ್ ಗೆ ತಿಳಿಸಿದ್ದಾರೆ. ನೂತನ ಸಮಿತಿಯು ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜನತೆಗೆ ಮುಟ್ಟುವಲ್ಲಿ ಪ್ರಥಮ ಆದ್ಯತೆಯಲ್ಲಿ ಕೆಲಸಗಳನ್ನು ಮಾಡುತ್ತೇವೆ ಎಂದು ಸತೀಶ್ ಕಾಶಿಪಟ್ನ ಮತ್ತು ನಾಗೇಶ್ ಕುಮಾರ್ ಗೌಡ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!