Thursday, June 4, 2026
Homeಕರಾವಳಿಬಂಟ್ವಾಳ; ಮಾಣಿಗುತ್ತಿನಲ್ಲಿ ವಿವಿಧ ದೈವಗಳ ಜೀರ್ಣೋದ್ಧಾರ ಹಿನ್ನೆಲೆ ಗುದ್ದಲಿ ಪೂಜೆ

ಬಂಟ್ವಾಳ; ಮಾಣಿಗುತ್ತಿನಲ್ಲಿ ವಿವಿಧ ದೈವಗಳ ಜೀರ್ಣೋದ್ಧಾರ ಹಿನ್ನೆಲೆ ಗುದ್ದಲಿ ಪೂಜೆ

- Advertisement -
- Advertisement -

ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ದಾರದ ಸಲುವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಮತ್ತು ಶ್ರೀ ಬೆಮ್ಮೆರ್, ಕಲ್ಲುರ್ಟಿ ಮತ್ತು ಬೊಣ್ಯ ಕೊರತಿ ದೈವಗಳ ಸಾನ್ನಿಧ್ಯಗಳಿಗೆ ಗುದ್ದಲಿ ಪೂಜೆಯು ಕ್ಷೇತ್ರದ ಪ್ರಧಾನ ಅರ್ಚಕ ಪಳನೀರು ಅನಂತ ಭಟ್ಟರವರ ಪೌರೋಹಿತ್ಯದಲ್ಲಿ ಜರಗಿತು.

ಸಚಿನ್ ರೈ ಮಾಣಿಗುತ್ತು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು, ಸುಧೀರ್ ಕುಮಾರ್ ಶೆಟ್ಟಿ ಬನ್ನೂರುಗುತ್ತು, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ನುಳಿಯಾಲುಗುತ್ತು, ಜಗನ್ನಾಥ ಚೌಟ ಬದಿಗುಡ್ಡೆ, ರವೀಂದ್ರ ರೈ ಖಂಡಿಗ, ಬಾಲಕೃಷ್ಣ ಆಳ್ವ ಕೊಡಾಜೆ, ಸಂದೇಶ್ ಶೆಟ್ಟಿ ಅರೆಬೆಟ್ಟು, ಸಂದೀಪ್ ಶೆಟ್ಟಿ ಅರೆಬೆಟ್ಟು ಮತ್ತು ಗ್ರಾಮದ ಪ್ರಮುಖರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಬಳಿಕ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರ ಸಭೆ ಮಾಣಿಕ್ಯ ಸಭಾಭವನದಲ್ಲಿ ನಡೆಯಿತು.

- Advertisement -

Latest News

error: Content is protected !!