Saturday, June 6, 2026
Homeಕರಾವಳಿಉಡುಪಿಕಾರ್ಕಳ; ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಮಹಿಳೆ ನೇಣಿಗೆ ಶರಣು

ಕಾರ್ಕಳ; ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಮಹಿಳೆ ನೇಣಿಗೆ ಶರಣು

- Advertisement -
- Advertisement -

ಕಾರ್ಕಳ; ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.


ಕಾರ್ಕಳದ ಮಾರ್ಕೆಟ್‌ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಮೃತ ಮಹಿಳೆ. ಪ್ರಮೀಳಾ ಕಾರ್ಕಳ ಪೇಟೆಯ ಮಾರ್ಕೆಟ್‌ ರಸ್ತೆಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತರ ಸಿಬ್ಬಂದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಪ್ರಮೀಳಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋದು ಗೊತ್ತಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest News

error: Content is protected !!