Saturday, June 27, 2026
Homeಕರಾವಳಿಮಂಗಳೂರು; ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ, ಮೂವರಿಗೆ ಗಾಯ

ಮಂಗಳೂರು; ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ, ಮೂವರಿಗೆ ಗಾಯ

- Advertisement -
- Advertisement -

ಮಂಗಳೂರು: ಅತಿ ವೇಗದ ಚಾಲನೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಾಯಗಳಾದ ಘಟನೆ ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ನಡೆದಿದೆ.


ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಅಲ್ಲಿದ್ದ ಪ್ರಪಾತದ ಸನಿಹದಲ್ಲೇ ಗಿಡಗಳ ಮಧ್ಯೆ ಸಿಲುಕಿಕೊಂಡಿದೆ.


ಕಾರು ಹೊಡೆದ ರಭಸಕ್ಕೆ ದಾರಿ ದೀಪದ ಲೈಟ್ ಕಂಬ ಕಿತ್ತು ದೂರಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಮೂವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!