Thursday, June 4, 2026
Homeಕರಾವಳಿಪುತ್ತೂರು; ರಸ್ತೆ ಬದಿ ಕಸ ಎಸದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರಪ್ರೇಮಿಗಳು

ಪುತ್ತೂರು; ರಸ್ತೆ ಬದಿ ಕಸ ಎಸದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರಪ್ರೇಮಿಗಳು

- Advertisement -
- Advertisement -

ಪುತ್ತೂರು; ರಸ್ತೆ ಬದಿ ಕಸ ಎಸದವರಿಗೆ ಪರಿಸರಪ್ರೇಮಿಗಳು ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ಪುತ್ತೂರು ತಾಲೂಕಿನ ಬೆದ್ರಾಲ ಎಂಬಲ್ಲಿ ನಡೆದಿದೆ.

ಬೆದ್ರಾಲ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಬಿಳಿ ಬಣ್ಣದ ಗೋಣಿ ಚೀಲದಲ್ಲಿ ಖಾಲಿ ಬೀಯರ್ ಬಾಟಲಿ ಮತ್ತು ಕಸಗಳನ್ನು ತುಂಬಿಸಿ ಎಸೆದು ಹೋಗಿದ್ದಾರೆ. ಇದನ್ನು ಕಂಡ ಪರಿಸರ ಪ್ರೇಮಿಗಳು ಬಿಸಾಕಿ ಹೋಗಿದ್ದ ಕಸದ ಗೋಣಿ ಚೀಲದ ಬಳಿ ಈ ಕೃತ್ಯ ಎಸಗಿದವರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರಿಗೆ ಸದ್ಗತಿ ಕೋರುವ ಮತ್ತು ಅವರ ಕುಟುಂಬಕ್ಕೆ ಸದ್ಬುದ್ಧಿಯನ್ನು ನೀಡುವಂತೆ ಪರಮಾತ್ಮನಲ್ಲಿ ಕೋರುವ ಬರಹವನ್ನು ಅಳವಡಿಸಿದ್ದಾರೆ. ಇದು ತಮಾಷೆ ಅನಿಸಿದರೂ, ಮತ್ತೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ.

- Advertisement -

Latest News

error: Content is protected !!