Thursday, June 4, 2026
Homeಕರಾವಳಿವಿಟ್ಲ: ಅನಂತಾಡಿಯಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವು ಪ್ರಕರಣ; ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ...

ವಿಟ್ಲ: ಅನಂತಾಡಿಯಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವು ಪ್ರಕರಣ; ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ ಬಯಲು

- Advertisement -
- Advertisement -

ವಿಟ್ಲ: ಅನಂತಾಡಿಯಲ್ಲಿ ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ, ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆಗೆ ಇದೀಗ ತಿರುವು ಸಿಕ್ಕಿದೆ. ಘಟನೆಗೆ ನಿಜವಾದ ಕಾರಣವನ್ನು ಮೃತ ಪ್ರತಾಪ್ ಸಹೋದರ ಪ್ರದೀಪ್ ಬಯಲು ಮಾಡಿದ್ದಾರೆ.

ಪ್ರತಾಪ್‌ ತನ್ನ ಪತ್ನಿ ವೀಣಾ ಬೇರೆ ವ್ಯಕ್ತಿಗೆ ಮೆಸೆಜ್‌ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಜಗಳವಾಗಿ ಜು.1 ರಂದು ಮನೆಯ ಊಟದ ಕೋಣೆಯ ಸಿಲಿಂಗ್‌ ಫ್ಯಾನಿಗೆ ಸೀರೆ ಕಟ್ಟಿ  ಪ್ರತಾಪ್ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.ಪತಿ ನೇತಾಡುತ್ತಿರುವುದನ್ನು ಕಂಡ ಅವರ ಪತ್ನಿ ವೀಣಾ ಇಸ್ತ್ರಿಪೆಟ್ಟಿಗೆಯ ವೈಯರ್‌ನ್ನು ಅದೇ ಫ್ಯಾನಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನು ಮಾಡಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ‌.

ಸುದ್ದಿ ತಿಳಿದು ಸ್ಥಳೀಯರು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದಾಗ ಪ್ರತಾಪ್ ರವರು ಮೃತಪಟ್ಟಿದ್ದು ವೀಣಾರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!