Monday, June 8, 2026
Homeಕರಾವಳಿಸಿಬ್ಬಂದಿಗೆ ಕೊರೊನಾ, ಮಂಗಳೂರಿನಲ್ಲಿ ಮಲಬಾರ್ ಗೋಲ್ಡ್ ಮಳಿಗೆ ಸೀಲ್ ಡೌನ್

ಸಿಬ್ಬಂದಿಗೆ ಕೊರೊನಾ, ಮಂಗಳೂರಿನಲ್ಲಿ ಮಲಬಾರ್ ಗೋಲ್ಡ್ ಮಳಿಗೆ ಸೀಲ್ ಡೌನ್

- Advertisement -
- Advertisement -

ಮಂಗಳೂರು :  ಸದ್ಯ ಪರಿಸ್ಥಿತಿ ಹೇಗಿದೆ ಅಂದ್ರೆ ಮನೆಯಿಂದ ಹೊರಗೆ ಹೋಗೋದಕ್ಕೆ ಸಾವಿರ ಸಲ ಯೋಚಿಸುವಂತಾಗಿದೆ. ಪ್ರತಿಯೊಬ್ಬರನ್ನು ಅನುಮಾನ ಹಾಗೇ ಭಯದಿಂದಲೇ ನೋಡುವಂತೆ ಮಾಡಿದೆ ಕೊರೊನಾ. ನಗರ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಿದ್ರೆ ಸಾಕಪ್ಪಾ ಅಂತಾ ಕೊಂಚ ನೆಮ್ಮದಿಯಿಂದ ಇದ್ದ ಹಳ್ಳಿ ಜನ ಕೂಡ ಈಗ ಮನೆಯಿಂದ ಆಚೆ ಬರೋಕೆ ಹಿಂದೇಟು ಹಾಕುವಂತಾಗಿದೆ.

ಅದರಲ್ಲೂ ಕರಾವಳಿ ಭಾಗದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇದೀಗ ಮಂಗಳೂರಿನ ಫಳ್ನೀರ್ ನಲ್ಲಿರುವ ಮಲಬಾರ್ ಗೋಲ್ಡ್  ಮಳಿಗೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಲಬಾರ್ ಗೋಲ್ಡ್ ಮಳಿಗೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಕೊರೊನಾ ಸೋಂಕು ಹೇಗೆ ಬಂತು ಅನ್ನೋ ಬಗ್ಗೆ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.

- Advertisement -

Latest News

error: Content is protected !!