Sunday, June 7, 2026
Homeಕರಾವಳಿಉಡುಪಿಖಾಸಗಿ ಬಸ್ ಚಾಲಕನಿಗೆ ಕೊರೊನಾ ಪಾಸಿಟಿವ್, ಪಾಂಡೇಶ್ವರದಲ್ಲಿ ಸೋಂಕಿತನ ಏರಿಯಾ ಸೀಲ್ ಡೌನ್

ಖಾಸಗಿ ಬಸ್ ಚಾಲಕನಿಗೆ ಕೊರೊನಾ ಪಾಸಿಟಿವ್, ಪಾಂಡೇಶ್ವರದಲ್ಲಿ ಸೋಂಕಿತನ ಏರಿಯಾ ಸೀಲ್ ಡೌನ್

- Advertisement -
- Advertisement -

ಮಂಗಳೂರು :  ಕೊರೊನಾ ಅನ್ನೋ ಮಹಾಮಾರಿ ಯಾವಾಗ ಯಾರನ್ನು ಹೇಗೆ ಆವರಿಸಿಕೊಳ್ಳುತ್ತದೆ ಎಂದು ಹೇಳಿಕೊಳ್ಳೋದಕ್ಕೆ ಸಾಧ್ಯಾನೇ ಇಲ್ಲ. ದಿಲ್ಲಿಯಿಂದ ಹಿಡಿದು ಹಳ್ಳಿ ಹಳ್ಳಿಗೂ ಕಾಲಿಟ್ಟಿದೆ ಕೊರೊನಾ.ಇದೀಗ ಪಾಂಡೇಶ್ವರದಲ್ಲಿ ಖಾಸಗಿ ಚಾಲಕರೊಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದೆ. ಹಾಗಾಗಿ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರದಲ್ಲಿ  ಸೀಲ್ ಡೌನ್ ಮಾಡಲಾಗಿದೆ. ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಚಾಲಕರ ಪತ್ನಿ ಸ್ಥಳೀಯ ಗ್ರಾಮಪಂಚಾಯತ್ ಸದಸ್ಯೆಯಾಗಿದ್ದಾರೆ. ಇನ್ನು ಚಾಲಕ ಹೊರ ರಾಜ್ಯಗಳಿಗೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಅವರಗೆ ಜ್ವರ ಕಾಣಿಸಿಕೊಂಡಿತ್ತು.  ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಇರೋದು ದೃಢಪಟ್ಟಿದೆ.ಇದೀಗ ಅವರ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಅವರು ವಾಸಿಸುತ್ತಿದ್ದ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.

- Advertisement -

Latest News

error: Content is protected !!