Friday, June 5, 2026
Homeಕರಾವಳಿಮಂಗಳೂರುಕಡಬ; ಅನಾರೋಗ್ಯದಿಂದ ರಿಕ್ಷಾ ಚಾಲಕ ಸಾವು

ಕಡಬ; ಅನಾರೋಗ್ಯದಿಂದ ರಿಕ್ಷಾ ಚಾಲಕ ಸಾವು

- Advertisement -
- Advertisement -

ಕಡಬ; ಅನಾರೋಗ್ಯದಿಂದ ರಿಕ್ಷಾ ಚಾಲಕ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ.ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ, ಆಲಂಕಾರು ಆದರ್ಶ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಕಮಲಾಕ್ಷ ಗೌಡ(44) ಮೃತ ದುರ್ದೈವಿ.

ಮೂರು ದಿನದ ಹಿಂದೆ ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾಕ್ಷ ನಿನ್ನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕಮಲಾಕ್ಷ ಅವರು ಜೂ.20ರಂದು ಬೆಳಿಗ್ಗೆ ಮನೆಯಲ್ಲಿ ಬ್ರೈನ್ ಎಮರೇಜ್‌ಗೆ ತುತ್ತಾಗಿ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಸಹೋದರ ತಕ್ಷಣ ಆಲಂಕಾರಿನ ಕ್ಲಿನಿಕ್‌ಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಅದೇ ದಿನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಮಲಾಕ್ಷ ಗೌಡರವರು ಜೂ.22ರಂದು ಸಂಜೆ ಮೃತಪಟ್ಟಿದ್ದಾರೆ. ಕಮಲಾಕ್ಷ ಗೌಡರವರು ಕಳೆದ 5 ವರ್ಷಗಳಿಂದ ಆಲಂಕಾರಿನಲ್ಲಿ ಬಾಡಿಗೆ ರಿಕ್ಷಾ ಓಡಾಟ ನಡೆಸುತ್ತಿದ್ದರು.

- Advertisement -

Latest News

error: Content is protected !!