Saturday, June 6, 2026
Homeಕರಾವಳಿಮಂಗಳೂರು; ತಾಯಿ ಮೇಲೆಯೇ ಹಲ್ಲೆ ನಡೆಸಿದ ಪುತ್ರಿಯರು

ಮಂಗಳೂರು; ತಾಯಿ ಮೇಲೆಯೇ ಹಲ್ಲೆ ನಡೆಸಿದ ಪುತ್ರಿಯರು

- Advertisement -
- Advertisement -

ಮಂಗಳೂರು; ತಾಯಿ ಮೇಲೆಯೇ  ಪುತ್ರಿಯರು ಹಲ್ಲೆ ನಡೆಸಿದ ಘಟನೆ  ಮುಲ್ಕಿಯಲ್ಲಿ ನಡೆದಿದೆ. ಜಾಗದ ವಿಚಾರವಾಗಿ ಹೆತ್ತ ತಾಯಿಗೆ ಪುತ್ರಿಯರಿಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.

ಮನೋರಮಾ ಹೆನ್ರಿ ಹಲ್ಲೆಗೊಳಗಾದ ತಾಯಿ.  ಅವರ ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ಎಂಬವರು ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮನೋರಮಾ ಅವರು ಮುಲ್ಕಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಗದ ವಿಚಾರವಾಗಿ ತಾಯಿ ಮನೋರಮಾ ಮತ್ತು ಮಕ್ಕಳ ನಡುವೆ ಸೋಮವಾರ ಮಧ್ಯಾಹ್ನ ಜಗಳ ನಡೆದಿದೆ. ಈ ವೇಳೆ ಅನಿತಾ ಸೋನ್ಸ್ ನನ್ನ ಮನೆಯ ಅಡುಗೆ ಕೋಣೆಯೊಳಗೆ ಅಕ್ರಮವಾಗಿ ಬಂದು ಅಲ್ಲಿದ್ದ ನನ್ನನ್ನು ತಡೆದು ನಿಲ್ಲಿಸಿ ಅವಳ ಕೈಯಲ್ಲಿದ್ದ ನಾಯಿಗೆ ಊಟ ಹಾಕುವ ತಟ್ಟೆಯಿಂದ ಬಲವಾಗಿ ಹೊಡೆದಿದ್ದಾಳೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಂದೆ ಹೋಗುವುದು’ ಎಂದು ಜೀವ ಬೆದರಿಕೆ ಒಡ್ಡಿದ್ದಾಳೆ ಎಂದು ಮನೋರಮಾ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಮನೆಯ ಹೊರಗಿದ್ದ ಇನ್ನೊಬ್ಬ ಮಗಳು ಸ್ಯಾಂಡ್ರಾ ಬಂಗೇರ ಕೂಡ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದಾಗಿ ಮನೋರಮಾ ಅವರು ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!