Monday, June 15, 2026
Homeಕರಾವಳಿವಿಟ್ಲ: ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ದನ ಅಡ್ಡ ಬಂದು ಅಪಘಾತ, ಚಾಲಕ ಸಾವು

ವಿಟ್ಲ: ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ದನ ಅಡ್ಡ ಬಂದು ಅಪಘಾತ, ಚಾಲಕ ಸಾವು

- Advertisement -
- Advertisement -

ವಿಟ್ಲ: ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ದನ ಅಡ್ಡ ಬಂದು ಅಪಘಾತವಾಗಿ  ಆಟೋರಿಕ್ಷಾದಿಂದ ಚಾಲಕ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಪುಣಚದಲ್ಲಿ ಮಂಗಳವಾರ ನಡೆದಿದೆ.ಜಗನ್ನಾಥ ಪೈಸಾರಿ ಮೃತ ದುರ್ದೈವಿ.

ಜಗನ್ನಾಥ ಪೈಸಾರಿ ಅವರು ಮಧ್ಯಾಹ್ನ ಮಾಡಿ ಬಳಿಕ ಪುಣಚದ ಅಟೋರಿಕ್ಷಾ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದರು. ಈ ವೇಳೆ  ಮಣಿಲ ಎಂಬಲ್ಲಿ ರಿಕ್ಷಾಗೆ ದನ ಅಡ್ಡ ಬಂದಿದೆ. ಪರಿಣಾಮ ಅಟೋರಿಕ್ಷಾ ರಸ್ತೆಗೆ ಪಲ್ಟಿಯಾಗಿ ಬಿದ್ದ ಕಾರಣ, ಅವರ ತಲೆಗೆ ಗಂಭೀರ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರೆನ್ನಲಾಗಿದೆ.

ತುಳು ನಾಟಕ ರಂಗದಲ್ಲಿ ಹಾಸ್ಯ ಅಭಿನಯದ ಮೂಲಕ ಮಿಂಚಿದ್ದ ಅವರು, ಕಳೆದ ಮೂವತ್ತು ವರ್ಷಗಳಿಂದ ಆಟೋರಿಕ್ಷಾ ಚಾಲಕರಾಗಿ’ರಿಕ್ಷಾ ಜಗ್ಗಣ್ಣ’ಎಂದೇ ಗುರುತಿಸಲ್ಪಟ್ಟಿದ್ದರು.

- Advertisement -

Latest News

error: Content is protected !!