Thursday, July 23, 2026
Homeಕರಾವಳಿಬಂಟ್ವಾಳ; ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿ ಯುವತಿ ನಾಪತ್ತೆ

ಬಂಟ್ವಾಳ; ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿ ಯುವತಿ ನಾಪತ್ತೆ

- Advertisement -
- Advertisement -

ಬಂಟ್ವಾಳ; ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿ ಯುವತಿಯೊಬ್ಬಳು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುವ ಘಟನೆ  ಬಂಟ್ವಾಳದಲ್ಲಿ ನಡೆದಿದೆ. ಈ ಬಗ್ಗೆ  ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಅವರ ಮಗಳು ನೇಹಾ ಕಾಣೆಯಾದ ಯುವತಿ.

ಮಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನೇಹಾಗೆ ಮನೆಯವರು ಮದುವೆ ಮಾಡುವ ಉದ್ದೇಶದಿಂದ ಸಂಬಂಧ ನೋಡಲು ಮುಂದಾದಾಗ ಮದುವೆಗೆ ಸದ್ಯ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾಳೆ. ಅಲ್ಲದೇ ,ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿದೆ ಎಂದಿದ್ದಾಳೆ. ಆ ಬಳಿಕ ಮೇ.27 ರಂದು ನೇಹಾ ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆಂದು ಹೋದವಳು ಅದೇ ದಿನ ಸಂಜೆ 4 ಗಂಟೆಗೆ ನೇಹಾಳ ಚಿಕ್ಕಮ್ಮನ ಮೊಬೈಲ್ ಗೆ ನಾನು ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಳು.

ಇನ್ನು ಮೇ. 29 ರಂದು ಮತ್ತು ಜೂನ್ 6 ರಂದು ಒಟ್ಟು ಎರಡು ಪತ್ರ ಮನೆಯವರಿಗೆ ಬಂದಿದ್ದು ಪತ್ರದಲ್ಲಿ ನಾನು ಬೆಂಗಳೂರಿನಲ್ಲಿ ಇರುವುದಾಗಿ ಹಾಗೂ ನನ್ನನ್ನು ಹುಡುಕಬೇಡಿ ಎಂದು ಬರೆದಿದ್ದಾಳೆ ಎನ್ನಲಾಗಿದೆ.

ಆ ಬಳಿಕ ಮನೆಯವರನ್ನು ಸಂಪರ್ಕ ಮಾಡಿಲ್ಲ . ಹಾಗಾಗಿ ನೇಹ ಕಾಣೆಯಾಗಿರುವ ಸಂಶಯವಿದ್ದು ಇವಳನ್ನು ಹುಡುಕಿಕೊಡುವಂತೆ ನೇಹಾ ಅಣ್ಣ ಅವಿನಾಶ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.

- Advertisement -

Latest News

error: Content is protected !!