Friday, June 5, 2026
Homeಕರಾವಳಿಬಂಟ್ವಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಖಾಸಗಿ ಬಸ್

ಬಂಟ್ವಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಖಾಸಗಿ ಬಸ್

- Advertisement -
- Advertisement -

ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಚರಂಡಿಗೆ ಉರುಳಿದ ಘಟನೆ ರಾ.ಹೆ.75ರ ತುಂಬೆಯಲ್ಲಿ ನಡೆದಿದೆ.

ಬಿ.ಸಿ.ರೋಡು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಗೆ ಉರುಳಿದ ಘಟನೆ ಇಂದು ಬೆಳಗ್ಗೆ ನಡೆದಿದೆ.ಘಟನೆಯಲ್ಲಿ ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಬೇರೆ ವಾಹನಗಳಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಮಳೆಯ ಕಾರಣಕ್ಕೆ ಹೆದ್ದಾರಿ ಬದಿಯಲ್ಲಿ ಮಣ್ಣು ಸಡಿಲಗೊಂಡಿದ್ದು, ಹೀಗಾಗಿ ಚಕ್ರಗಳು ಜಾರಿ ಚರಂಡಿಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ನಿಯಂತ್ರಣ ಕಳೆದುಕೊಂಡ ರಭಸಕ್ಕೆ ಬಸ್ಸು ಮಂಗಳೂರು ಕಡೆಗೆ ತೆರಳುತ್ತಿದ್ದರೂ, ಮತ್ತೆ ಬಿ.ಸಿ.ರೋಡು ಕಡೆಗೆ ತಿರುಗಿ ನಿಂತಿದೆ.

- Advertisement -

Latest News

error: Content is protected !!