Saturday, April 27, 2024
Homeಕರಾವಳಿಉಡುಪಿಉಡುಪಿ; ಹೆಬ್ರಿಯಲ್ಲಿ ಬಸ್ ಹಾಗೂ ಕಾರಿನ ನಡುವೆ ಅಪಘಾತ; ಇಬ್ಬರು ಶಿಕ್ಷಕರು ಸಾವು

ಉಡುಪಿ; ಹೆಬ್ರಿಯಲ್ಲಿ ಬಸ್ ಹಾಗೂ ಕಾರಿನ ನಡುವೆ ಅಪಘಾತ; ಇಬ್ಬರು ಶಿಕ್ಷಕರು ಸಾವು

spot_img
- Advertisement -
- Advertisement -

ಉಡುಪಿ; ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ಘಟನೆ ಸೀತಾನದಿ ಜಕ್ಕನಮಕ್ಕಿ ಬಳಿ ನಡೆದಿದೆ.

ಉಡುಪಿ ಡಿಡಿಪಿಐ ಆಫೀಸ್ ನ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸೋಮಶೇಖರ್ ಮೃತ ದುರ್ದೈವಿಗಳು

ಉಡುಪಿಯಿಂದ ಆಗುಂಬೆ ಹೋಗುತ್ತಿರುವ ಬಸ್ ಹಾಗೂ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಟನೆಯಲ್ಲಿ ಶಿಕ್ಷಕ ಸುದರ್ಶನ್ ಹಾಗೂ ಕಾರು ಚಲಾಯಿಸುತ್ತಿದ್ದ ಸತೀಶ್ ಗೆ ಗಂಭೀರವಾಗಿ ಗಾಯಗಳಾಗಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ದಾವಣಗೆರೆಯ ಚೆನ್ನಗಿರಿಯಲ್ಲಿ ಸ್ನೇಹಿತ ಶಿಕ್ಷಕನ ವಿವಾಹ ಮುಗಿಸಿ ವಾಪಾಸ್ಸು ಬರುವಾಗ ಘಟನೆ ನಡೆದಿದೆ ಎನ್ನಲಾಗಿದೆ.ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಿ‌ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಹೆಬ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!