- Advertisement -
![]()
- Advertisement -
ಪುತ್ತೂರು: ತಲವಾರ್ ಹಿಡಿದು ಪುಡಿ ರೌಡಿಯೊಬ್ಬ ಅಟ್ಟಹಾಸ ಮೆರೆದ ಘಟನೆ ಪುತ್ತೂರಿನ ದರ್ಬೆ ಬಳಿ ನಡೆದಿದೆ.
ಪ್ರಜ್ವಲ್ ಎಂಬ ಪುಡಿ ರೌಡಿ ತಲವಾರ್ ಹಿಡಿದು ಈತ ಬರ್ತಡೇ ಪಾರ್ಟಿಯೊಂದು ನಡೆಯುತ್ತಿದ್ದ ಕಟ್ಟಡದೊಳಗೆ ನುಗ್ಗಿದ್ದಾನೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಸ್ಟೇರ್ ಕೇಸ್ ನಿಂದ ಬಿದ್ದು ಯುವಕನಿಗೆ ಗಾಯಗಳಾಗಿದೆ.
ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈತ ಭೂಗತಲೋಕದ ಡಾನ್ ಗಳ ಹೆಸರಿನಲ್ಲಿ ಆಟಾಟೋಪ ಮಾಡುತ್ತಿದ್ದಾನೆ ಎಂದು ಹೇಳಲಾಗಿದ್ದು, ವಿದೇಶದಿಂದ ಬಂದ ಸೂಚನೆ ಮೇರೆಗೆ ಈ ದಾಳಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
- Advertisement -


