Friday, June 26, 2026
Homeಕರಾವಳಿಮಂಗಳೂರು:ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ; ಗಾಯಗೊಂಡ ಹುಲಿ ಸಾವು

ಮಂಗಳೂರು:ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾದಾಟ; ಗಾಯಗೊಂಡ ಹುಲಿ ಸಾವು

- Advertisement -
- Advertisement -

ಮಂಗಳೂರು:ಎರಡು ಹುಲಿಗಳ ನಡುವೆ ಕಾದಾಟ ನಡೆದು ಗಾಯಗೊಂಡ ಹುಲಿ ಸಾವನ್ನಪ್ಪಿದ ಘಟನೆ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ನಡೆದಿದೆ.
ತನ್ನ ಸಂಗಾತಿಯೊಂದಿಗಿನ ಕಾದಾಟದಲ್ಲಿ 15 ವರ್ಷದ ಹೆಣ್ಣು ಹುಲಿ ಗಾಯಗೊಂಡಿತ್ತು. ಗಾಯಗೊಂಡ ಹುಲಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಹೆಣ್ಣುಹುಲಿ ಇಂದು ಬೆಳಗ್ಗೆ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷಾ ವರದಿ ಸಿಗಬೇಕಾಗಿದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ ಪ್ರಕಾಶ್ ಭಂಡಾರಿ ತಿಳಿಸಿದ್ದಾರೆ

- Advertisement -

Latest News

error: Content is protected !!