Thursday, June 4, 2026
Homeಕರಾವಳಿಬೆಳ್ತಂಗಡಿ; ಬಂಡಾಜೆ ಫಾಲ್ಸ್ ಕಡೆ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಪತ್ತೆ

ಬೆಳ್ತಂಗಡಿ; ಬಂಡಾಜೆ ಫಾಲ್ಸ್ ಕಡೆ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಪತ್ತೆ

- Advertisement -
- Advertisement -

ಬೆಳ್ತಂಗಡಿ; ಬಂಡಾಜೆ ಫಾಲ್ಸ್ ಕಡೆ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಕೊನೆಗೂ ಪತ್ತೆಯಾಗಿದ್ದಾರೆ.

ಬೆಂಗಳೂರು ಜೆಪಿ ನಗರದ ಪರೋಸ್‌ ಅಗರ್ವಾಲ್‌ ಎಂಬ ಯುವಕ ನಿನ್ನೆ ಸಂಜೆ ರಾಣಿಝರಿ ಸಮೀಪದವರೆಗೆ ಬೈಕ್‌ನಲ್ಲಿ ಬಂದು ಇಲ್ಲಿಂದ ಬಂಡಾಜೆ ಫಾಲ್ಸ್ ಕಡೆಯಿಂದ ಟ್ರಕ್ಕಿಂಗ್ ನಡೆಸಿದ್ದರು. ಬಳಿಕ ನಾಪತ್ತೆಯಾಗಿದ್ದರು.ಹೀಗಾಗಿ ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆ, ಸ್ಥಳೀಯ ಸಹಾಯದಿಂದ ಶೋಧ ಕಾರ್ಯ ನಡೆಸಲಾಗಿತ್ತು. 

ಇದೀಗ ಪರೋಸ್‌ ಅಗರ್ವಾಲ್‌ ಅವರನ್ನು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದ್ದು, ಆ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

- Advertisement -

Latest News

error: Content is protected !!