Sunday, June 7, 2026
Homeತಾಜಾ ಸುದ್ದಿಪತಿಗೆ ಡಿವೋರ್ಸ್ ಕೊಟ್ಟು ಯುವತಿಯನ್ನು ಮದುವೆಯಾದ ಮಹಿಳೆ

ಪತಿಗೆ ಡಿವೋರ್ಸ್ ಕೊಟ್ಟು ಯುವತಿಯನ್ನು ಮದುವೆಯಾದ ಮಹಿಳೆ

- Advertisement -
- Advertisement -

ಪ.ಬಂಗಾಳ; ಪತಿಗೆ ವಿಚ್ಛೇದನ ನೀಡಿ ಮಹಿಳೆ ಯುವತಿಯೊಬ್ಬಳನ್ನು ಮದುವೆಯಾದ ಅಚ್ಚರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಇಬ್ಬರು ಚಿಂಗ್ರಿಘಾಟಾದ ಬಗ್ದಾರ್‌ನಲ್ಲಿರುವ ಭೂತನಾಥ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಮದುವೆಯಾಗಿದ್ದಾರೆ. ಮೌಸುಮಿ ದತ್ತಾ ಎಂಬಾಕೆಗೆ ಮೊದಲು ಮದುವೆಯಾಗಿ 2 ಮಕ್ಕಳಿದ್ದಾರೆ. ಇಬ್ಬರೂ ಯುವತಿಯರಾದ ಮೌಸುಮಿ ಮತ್ತು ಮೌಮಿತಾ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದಿದ್ದಾರೆ.ಬಹಳ ದಿನಗಳ ಗೆಳತನದ ನಂತರ ಅವರಿಬ್ಬರ ನಡುವೆ ಪ್ರೇಮ‌ ಬೆಳೆದು ಮದುವೆಯಾಗಿದ್ದಾರೆ.ಇದೀಗ ಮಕ್ಕಳು ಕೂಡ ಮೌಮಿತಾ ಮತ್ತು ಮೌಸುಮಿ ಜೊತೆಯೇ ವಾಸಿಸುತ್ತಿದ್ದಾರೆ.

ಈ ಮದುವೆಗೆ ಮೌಮಿತಾ ಕುಟುಂಬದವರು ಒಪ್ಪಿಗೆ ನೀಡಿಲ್ಲ.ಆಕೆಯನ್ನು ಮನೆಯೊಳಗೆ ಬಾರದಂತೆ ತಡೆದಿದ್ದಾರೆ ಎನ್ನಲಾಗಿದೆ.ಇದರಿಂದಾಗಿ ಇಬ್ಬರು ಕೂಡ ಈಗ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ.

ಎಲ್ಲಾ ಸಂಪ್ರದಾಯವನ್ನು ಮುರಿದು, ಮೌಮಿತಾ ಮತ್ತು ಮೌಸುಮಿ ಪರಸ್ಪರ ವಿವಾಹವಾಗಿದ್ದಾರೆ.ಈ ಇಬ್ಬರು ಚಿಂಗ್ರಿಘಾಟಾದ ಬಗ್ದಾರ್‌ನಲ್ಲಿರುವ ಭೂತನಾಥ ದೇವಾಲಯದ ಮುಂದೆ ವಿವಾಹವಾಗಿರುವ ಬಗ್ಗೆ ವರದಿಯಾಗಿದೆ.

- Advertisement -

Latest News

error: Content is protected !!