Saturday, August 29, 2026
Homeಕರಾವಳಿಮಂಗಳೂರು ಕಾರಾಗೃಹದ ಸಿಬ್ಬಂದಿ ಅಮಾನತು

ಮಂಗಳೂರು ಕಾರಾಗೃಹದ ಸಿಬ್ಬಂದಿ ಅಮಾನತು

- Advertisement -
- Advertisement -

ಮಂಗಳೂರು: ಕೈದಿಗೆ ಗಾಂಜಾ ಪೂರೈಸಲು ಸಹಕರಿಸದ ಆರೋಪದಡಿ ಬಂಧಿಸಲ್ಪಟ್ಟ ಮಂಗಳೂರಿನ ಕೋಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಸಿಬ್ಬಂದಿ ಪ್ರಕಾಶ್ ಗಾವಡೆ ಎಂಬಾತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕಾರಾಗೃಹದಲ್ಲಿ ಕೆಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡುವಾಗ ಪ್ರಕಾಶ್ ಗಾವಡೆ ಬಳಿ ಗಾಂಜಾ ಪತ್ತೆಯಾಗಿತ್ತು.ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದೀಗ ಅಮಾನತುಗೊಳಿಸಲಾಗಿದೆ.

- Advertisement -

Latest News

error: Content is protected !!