Wednesday, June 3, 2026
Homeಕರಾವಳಿಪುತ್ತೂರು: ಅಪಪ್ರಚಾರ ನಿಲ್ಲಿಸಿ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ದುಡಿಯೋಣ – ಯತ್ನಾಳ್‌

ಪುತ್ತೂರು: ಅಪಪ್ರಚಾರ ನಿಲ್ಲಿಸಿ ಎಲ್ಲರೂ ಒಂದಾಗಿ ಪಕ್ಷಕ್ಕಾಗಿ ದುಡಿಯೋಣ – ಯತ್ನಾಳ್‌

- Advertisement -
- Advertisement -

ಪುತ್ತೂರು: ಪುತ್ತೂರಿನ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ‌ಸುಳ್ಳು ಸುದ್ದಿ ಹರಡೋದನ್ನ ನಿಲ್ಲಿಸಿ ಎಲ್ಲರೂ ಒಂದಾಗಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗೋಣ ಎಂದು ಹೇಳಿದ್ರು.

ಅವ್ರು ಇಂದು ಪುತ್ತೂರಿಗೆ ಆಗಮಿಸಿ ಪೊಲೀಸರಿಂದ ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದ್ರು. ನಂತರ ಬಿಜೆಪಿ ಕಚೇರಿಗೆ ಆಗಮಿಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವ್ರು, ಘಟನೆಯನ್ನು ಮತ್ತೆ ಮತ್ತೆ ಕೆದಕೋದು ಬೇಡ. ನಾನು ಕಾರ್ಯಕರ್ತರಲ್ಲಿ ಮನವಿ ಮಾಡ್ತೀನಿ. ಸಂಘ ಪರಿವಾರಕ್ಕೆ ಕೆಟ್ಟ ಹೆಸರು ಬಾರದಂತೆ ಒಟ್ಟಾಗಿ ಶ್ರಮಿಸೋಣ. ಮುಂದೆ ಲೋಕಸಭಾ ಎಲೆಕ್ಷನ್‌ ಬರಲಿದೆ. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗೋಣ ಎಂದು ತಿಳಿಸಿದ್ರು.

- Advertisement -

Latest News

error: Content is protected !!