Friday, June 5, 2026
Homeಕರಾವಳಿಮಂಗಳೂರು; ಖಾಸಗಿ ಬಸ್ ಗಳ ನಡುವೆ ಅಪಘಾತ; ಇಬ್ಬರಿಗೆ ಗಾಯ

ಮಂಗಳೂರು; ಖಾಸಗಿ ಬಸ್ ಗಳ ನಡುವೆ ಅಪಘಾತ; ಇಬ್ಬರಿಗೆ ಗಾಯ

- Advertisement -
- Advertisement -

ಮಂಗಳೂರು: ಖಾಸಗಿ ಬಸ್ ಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ  ಹಂಪನಕಟ್ಟೆ ಬಳಿ ನಡೆದಿದೆ.  ಹಂಪನಕಟ್ಟೆಯ ಸಿಗ್ನಲ್ ಬಳಿ ಮೂರು ಸಿಟಿ ಬಸ್‌ಗಳ ಮಧ್ಯೆ ಸೋಮವಾರ ಮಧ್ಯಾಹ್ನ ಸರಣಿ ಅಪಘಾತವಾಗಿದೆ.

ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ಸ್ಟೇಟ್‌ಬ್ಯಾಂಕ್‌ನಿಂದ ಕುಂಜತ್ತಬೈಲ್ ಕಡೆಗೆ ಹೋಗುತ್ತಿದ್ದ 13 ನಂಬರಿನ ಬಸ್ಸೊಂದು ತಲಪಾಡಿ ಕಡೆಗೆ ಹೋಗುತ್ತಿದ್ದ 42 ನಂಬರಿನ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿಯಾಗಿದೆ. ಇದರ ರಭಸಕ್ಕೆ ತಲಪಾಡಿಗೆ ಹೋಗುತ್ತಿದ್ದ ಬಸ್, ಅದರ ಮುಂಭಾಗದಲ್ಲಿದ್ದ ನೀರುಮಾರ್ಗಕ್ಕೆ ಹೋಗುತ್ತಿದ್ದ 21 ನಂಬರಿನ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂರು ಬಸ್‌ಗಳು ಜಖಂಗೊಂಡಿವೆ. ಅಲ್ಲದೆ ಕುಂಜತ್ತಬೈಲ್ ಬಸ್ಸಿನ ಚಾಲಕ ಮತ್ತು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯವಾಗಿದೆ.

- Advertisement -

Latest News

error: Content is protected !!