Saturday, June 6, 2026
Homeಕರಾವಳಿ ಕಾರ್ಕಳ; ಓಟು ಹಾಕಿದ ವಿಚಾರಕ್ಕೆ ರಿಕ್ಷಾ ಚಾಲಕನಿಗೆ ಬಿಜೆಪಿ ಕಾರ್ಯಕರ್ತ ಹಲ್ಲೆ ಆರೋಪ

 ಕಾರ್ಕಳ; ಓಟು ಹಾಕಿದ ವಿಚಾರಕ್ಕೆ ರಿಕ್ಷಾ ಚಾಲಕನಿಗೆ ಬಿಜೆಪಿ ಕಾರ್ಯಕರ್ತ ಹಲ್ಲೆ ಆರೋಪ

- Advertisement -
- Advertisement -

ಕಾರ್ಕಳ; ಯಾರಿಗೆ ಓಟು ಹಾಕಿದ್ದಿ ಎಂದು ರಿಕ್ಷಾ ಚಾಲಕನೊಬ್ಬನಿಗೆ ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕಾರ್ಕಳದಲ್ಲಿ ಕೇಳಿ ಬಂದಿದೆ. ಪಳ್ಳಿ ಗ್ರಾಮದ ವಾಸಿ ಚರಣ್ ಹಲ್ಲೆ ಮಾಡಿದ ಆರೋಪಿ. ರಿತೇಶ್ ಹಲ್ಲೆ ಮಾಡಿದ ಆರೋಪಿ.

ರಿತೇಶ್ ಪಳ್ಳಿಯಲ್ಲಿ ಅಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮೇ.13 ರಂದು ನಿಂಜೂರಿಗೆ ಬಾಡಿಗೆ ಬಿಟ್ಟು ರಿಕ್ಷಾದಲ್ಲಿ ಹಿಂತಿರುಗುತ್ತಿದ್ದರು.ಈ ವೇಳೆ  ಚರಣ್  ಕಾರಿನಲ್ಲಿ ಬಂದು ರಿಕ್ಷಾವನ್ನು ತಡೆದು ನಿಲ್ಲಿಸಿದ್ದಾನೆ. “ನೀನು ಯಾರಿಗೆ ಓಟು ಹಾಕಿದ್ದೀ” ಎಂದು ಅವಾಚ್ಯ ಶಬ್ದಗಳಿಂದ ಬೈದು ರಿಕ್ಷಾವನ್ನು ಹತ್ತಿರದಲ್ಲೇ ಇದ್ದ ತೋಡಿಗೆ ದೂಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಜೊತೆಗೆ “ನಿಮ್ಮ ಅಣ್ಣ ಅನೂರು ಶೆಟ್ಟಿ ಎಲ್ಲಿದ್ದಾನೆ. ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಚರಣ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!