- Advertisement -
![]()
- Advertisement -
ಮಂಡ್ಯ; ಪತ್ನಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಿಡಿಲು ಬಡಿದು ನವವಿವಾಹಿತ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮದ್ದೂರಿನ ವೈದ್ಯನಾಥಪುರ ನಿವಾಸಿ ಮಧು(35) ಮೃತ ದುರ್ದೈವಿ.
ಮತದಾನ ಮಾಡಿ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರಲು ಹೋಗಿದ್ದ ಮಧು, ಸಣ್ಣದಾಗಿ ಸುರಿಯುತ್ತಿದ್ದ ಮಳೆಯ ನಡುವೆ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಮದ್ದೂರು ತಾಲೂಕಿನ ಹರಳಹಳ್ಳಿ ಸರ್ಕಲ್ ಬಳಿ ಬೈಕ್ನಕಲ್ಲಿ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಳೆ ಜೋರಾದ ಹಿನ್ನಲೆ ಮಧು ಬೈಕ್ ನ್ನು ಹರಳಹಳ್ಳಿ ಸರ್ಕಲ್ ಬಳಿ ಮರದಡಿಯಲ್ಲಿ ನಿಲ್ಲಿಸಿ ನಿಂತುಕೊಂಡಿದ್ದನು. ಹೆಲ್ಮೆಟ್ ಧರಿಸಿ, ಪೋನ್ ನಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಮಧು ಮೃತಪಟ್ಟಿದ್ದಾರೆ.
- Advertisement -


