Saturday, June 6, 2026
Homeಕರಾವಳಿಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆ ಬಿಗ್ ಶಾಕ್ ;  ಸಹೋದರ ಸುಬ್ರಮಣ್ಯ ರೈ...

ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆ ಬಿಗ್ ಶಾಕ್ ;  ಸಹೋದರ ಸುಬ್ರಮಣ್ಯ ರೈ ಮನೆ ಮೇಲೆ ಐಟಿ ದಾಳಿ; ಮನೆಯಂಗಳದ ಗಿಡದಲ್ಲಿ ನೇತಾಡುತ್ತಿತ್ತು  ಕೋಟಿ ರೂಪಾಯಿ

- Advertisement -
- Advertisement -

ಬೆಂಗಳೂರು: ತಾನೇ ಅತ್ಯಂತ ಪ್ರಾಮಾಣಿಕ ಎಂದು ಪೋಸ್ ಕೊಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಭಾಷಣ ಮಾಡುವ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ ಐಟಿ ಅಧಿಕಾರಿಗಳು ಮೆಲ್ಲಗೆ ಬಿಸಿ ಮುಟ್ಟಿಸಿದ್ದಾರೆ.

ಮೈಸೂರಿನಲ್ಲಿರುವ ಅವರ ಸಹೋದರ ಸುಬ್ರಮಣ್ಯ ರೈ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ  ಅವರ ಮನೆಯಂಗಳದಲ್ಲಿದ್ದ ಗಿಡದಲ್ಲಿ ನೇತು ಹಾಕಿದ್ದ ಒಂದು ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮನೆಯಂಗಳದಲ್ಲೇ ಇಷ್ಟೊಂದು ಮೊತ್ತದ ಹಣ ಪತ್ತೆಯಾದರೆ ಅವರ ಭ್ರಷ್ಟಾಚಾರ ಯಾವ ಹಂತದಲ್ಲಿ ಇರಬಹುದು ಎಂಬುವುದನ್ನು ನೀವೇ ಊಹಿಸಿಕೊಳ್ಳಿ.  

ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ನಾಲಿಗೆ ಹರಿ ಬಿಡುವ ಅಶೋಕ್ ರೈ ಸಹೋದರನ ಮನೆ ಮೇಲೆಯೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಈಗ ಅವರು ಯಾವ ಮುಖ ಇಟ್ಟುಕೊಂಡು ವೋಟು ಕೇಳುತ್ತಾರೆ ಜನ ಗುಸುಗುಸು ಪಿಸುಪಿಸು ಅನ್ನುತ್ತಿದ್ದಾರೆ.

- Advertisement -

Latest News

error: Content is protected !!