Sunday, June 7, 2026
Homeತಾಜಾ ಸುದ್ದಿಕೊರೋನಾದಿಂದ ಪಾರಾಗಲು ಇದೊಂದೇ ಪರಿಹಾರ: ಕುಮಾರಸ್ವಾಮಿ ಟ್ವೀಟ್

ಕೊರೋನಾದಿಂದ ಪಾರಾಗಲು ಇದೊಂದೇ ಪರಿಹಾರ: ಕುಮಾರಸ್ವಾಮಿ ಟ್ವೀಟ್

- Advertisement -
- Advertisement -

ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್​ಗಳಿಲ್ಲ, ವೆಂಟಿಲೇಟರ್ ಕೊರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಈ ಸಮಸ್ಯೆಗೆ ಸ್ವಯಂ ಪ್ರೇರಿತ ಲಾಕ್​ಡೌನ್ ಒಂದೇ ಪರಿಹಾರ ಎಂದಿದ್ದಾರೆ.

ಈಗಾಗಲೇ ಬೆಂಗಳೂರಲ್ಲಿ ಲಾಕ್ ಡೌನ್ ಮಾಡುವಂತೆ ಒತ್ತಾಯಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಇವತ್ತು ಸ್ವತಃ ಜನರೇ ಲಾಕ್ ಡೌನ್ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕುಟುಂಬದ ನಾಲ್ಕು ಜನರಿಗೆ ಕೊರೋನಾ ಬಂದರೆ,15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗಧಿ ಪಡಿಸಿರುವ ದರದ ಪ್ರಕಾರ 5 ರಿಂದ 6 ಲಕ್ಷ ರೂಪಾಯಿ ಬೇಕು. ಹೀಗಾಗಿ ಇಷ್ಟೊಂದು ದುಡ್ಡನ್ನು ಬಡವರು, ಮಧ್ಯಮ ವರ್ಗದವರು ಎಲ್ಲಿಂದ ತರುತ್ತಾರೆ. ಸರ್ಕಾರ ಕೈ ಚೆಲ್ಲಿ ಕುಳಿತಿರುವಾಗ ನಮ್ಮ ಜೀವನವನ್ನು ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಎಲ್ಲರೂ ಎಚ್ಚರ ದಿಂದ ಇರಿ ಎಂದು ರಾಜ್ಯದ ಜನರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!