Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು ; ಮೂಡಿಗೆರೆ  ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ; ಮೂಡಿಗೆರೆ  ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ನಾಮಪತ್ರ ಸಲ್ಲಿಕೆ

- Advertisement -
- Advertisement -

ಚಿಕ್ಕಮಗಳೂರು ; ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಮೂಡಿಗೆರೆ  ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶಿಸಿದ್ರು. ರೋಡ್ ಶೋ ನಲ್ಲಿ ದೀಪಕ್ ದೊಡ್ಡಯ್ಯಗೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಾಥ್ ನೀಡಿದರು.

ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದ ದೀಪಕ್ ದೊಡ್ಡಯ್ಯ ಬೃಹತ್ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದೇ ವೇಳೆ ಮಾತನಾಡಿದ ಸಿ ಟಿ ರವಿ  ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ದೋಖಾ ಮಾಡಿದ ವ್ಯಕ್ತಿ ಎಚ್ ಡಿ ಕುಮಾರಸ್ವಾಮಿಗೆ ದೋಖಾ ಮಾಡದೆ ಇರ್ತಾರಾ ಅಂತ ಲೇವಡಿ ಮಾಡಿದರು.ಕುಮಾರಸ್ವಾಮಿ ವಿರುದ್ಧ ನೇರವಾಗಿ ಕಿಡಿ ಕಾರಿದ ಸಿ ಟಿ ರವಿ, ಬೆಕ್ಕು ಕದ್ದು ಮುಚ್ಚಿ ಹಾಲ್ ಕುಡಿದರೆ ಜಗತ್ತಿಗೆ ಗೊತ್ತಾಗೋದಿಲ್ವೇ?ಮೂಡಿಗೆರೆ ಜನಕ್ಕೆ ಕಳ್ಳ ಅಂತ ಗೊತ್ತಿಲ್ವಾ? ಮಧ್ಯಾಹ್ನ ಎಲ್ ಮಲಗಿದ್ದ ರಾತ್ರಿಗೆ ಎಲ್ಲಿ ಮಲಗಿದ್ದ ಅಂಚಾ ಮೂಡಿಗೆರೆ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

- Advertisement -

Latest News

error: Content is protected !!