Saturday, June 6, 2026
Homeಕರಾವಳಿಸುಬ್ರಮಣ್ಯ: ಕೆಲಸಕ್ಕೆಂದು ಹೋದ ವ್ಯಕ್ತಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು

ಸುಬ್ರಮಣ್ಯ: ಕೆಲಸಕ್ಕೆಂದು ಹೋದ ವ್ಯಕ್ತಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು

- Advertisement -
- Advertisement -

ಸುಬ್ರಮಣ್ಯ: ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ  ಪಂಜ ಸಮೀಪದ ಕರಿಕ್ಕಳದ ಪಂಬೆತ್ತಾಡಿಯಲ್ಲಿ ನಡೆದಿದೆ. ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ನೇರಳಗದ್ದೆಯ ಉಕ್ರಪ್ಪ  ಹಲ್ಲೆಗೊಳಗಾವರು.

  ಎ.12 ರಂದು  ಉಕ್ರಪ್ಪ ಅವರು ಕೆಲಸಕ್ಕೆ ಹೋದ ವೇಳೆ  ಅಡಿಕೆ ಚೀಲ ಎತ್ತುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು  ಹಲ್ಲೆ ಮಾಡಿರುವುದಾಗಿ  ಆರೋಪಿಸಲಾಗಿದೆ.  ಇದರಿಂದ ಉಕ್ರಪ್ಪ ಅವರ ಕೈಗೆ ಗಂಭೀರ ಗಾಯವಾಗಿದ್ದು  ಸುಬ್ರಹ್ಮಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯವರ ಒತ್ತಾಯದ ಮೇರೆಗೆ ಎ.13ರಂದು   ಕಡಬ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಇನ್ನು ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದು ಹಲ್ಲೆ ಮಾಡಿದ್ದಾರೆ ಎನ್ನಲಾದ ವ್ಯಕ್ತಿ ಆಸ್ಪತ್ರೆಗೆ ಬಂದು ವಾಗ್ವಾದ ನಡೆಸಿದಲ್ಲದೆ ಅವರ ಬಳಗದಲ್ಲಿದ್ದ ವ್ಯಕ್ತಿಯೊಬ್ಬ  ಆಸ್ಪತ್ರೆಗೆಯ ಕೊಠಡಿಗೆ ಅನುಮತಿ ರಹಿತವಾಗಿ ನುಗ್ಗಿ ಹಲ್ಲೆಗೊಳಗಾದ ವ್ಯಕ್ತಿಯ ಮಗಳ ಸಹಿತ  ವೀಡಿಯೋ ಚಿತ್ರೀಕರಣ ಮಾಡಿಕೊಂಡು ಹೋಗಿರುವುದಾಗಿ  ಹಲ್ಲೆಗೊಳಗಾದ  ವ್ಯಕ್ತಿಯ ಮಗಳು ಮಾಹಿತಿ ನೀಡಿದ್ದಾರೆ.   ಸದ್ಯ ಬೆಳ್ಳಾರೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಗೆ ಬರುವುದಾಗಿ ತಿಳಿದು ಬಂದಿದೆ. ಪೊಲೀಸರ ಪರಿಶೀಲನೆಯ ಬಳಿಕ ಸತ್ಯಾಂಶ ಹೊರ ಬರಲಿದೆ.

- Advertisement -

Latest News

error: Content is protected !!